ಜಿಲ್ಲೆಯಲ್ಲಿ ಪ್ರವಾಹÀ - ಭೂಕುಸಿತ ಉಂಟಾದ ಸಂದರ್ಭ ಹಾಗೂ ಇದೀಗ ನಂತರದಲ್ಲಿ ಕೈಗೊಂಡ, ಕೈಗೊಳ್ಳಲಿರುವ ಪರಿಹಾರೋಪಾಯಗಳ ‘ಶಕ್ತಿ’ ಶಾಸಕ ಕೆ.ಜಿ. ಬೋಪಯ್ಯ ಅವರಲ್ಲಿ ಅಭಿಪ್ರಾಯ ಬಯಸಿದಾಗ ಪ್ರತಿಕ್ರಿಯಿಸಿದ ಶಾಸಕರು; ವೀರಾಜಪೇಟೆ ಕ್ಷೇತ್ರದಲ್ಲಿ ಸಂಪೂರ್ಣ ಮನೆ ಹಾನಿಯಾದವರಿಗೆ ಸೇರಿದಂತೆ ಒಟ್ಟು ರೂ. 2 ಕೋಟಿಯಷ್ಟು ಪರಿಹಾರ ವಿತರಣೆ ಮಾಡಲಾಗಿದೆ. ಭಾಗಶಃ ಹಾನಿಯಾದ ಮನೆಗಳಿಗೆ ದುರಸ್ತಿಗೆ ಒಂದು ಲಕ್ಷ, ಹೊಸದಾಗಿ ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳುವವರಿಗೆ ರೂ. 5ಲಕ್ಷ ಪರಿಹಾರ ನೀಡಲಾಗುವದು. ಜಾಗ ಇಲ್ಲದವರಿಗೆ ಸರಕಾರದ ನಿಯಮದಂತೆ ಬೇರೆ ಕಡೆಗಳಲ್ಲಿ ನಿವೇಶನ ಗುರುತಿಸಿ ಮನೆ ನಿರ್ಮಿಸಿಕೊಡಲಾಗುವದು ಎಂದು ತಿಳಿಸಿದರು. ಬೆಳೆ ಹಾನಿ ಬಗ್ಗೆ ಸಂಬಂಧಿಸಿದ ಇಲಾಖೆಗಳು ಈಗಾಗಲೇ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯದಲ್ಲೇ ಕೇಂದ್ರ ಸರಕಾರದಿಂದ ಎನ್‍ಡಿಆರ್‍ಎಫ್ ಯೋಜನೆಯಡಿ ಅನುದಾನ ಬರಲಿದ್ದು, ಬಂದ ಕೂಡಲೇ ನಷ್ಟಕ್ಕೊಳಗಾದವರಿಗೆ ವಿತರಿಸಲಾಗುವದೆಂದರು.

ಕೆಲವು ಕಡೆ ಹಕ್ಕು ಪತ್ರ ಇಲ್ಲದವರಿಗೆ ಮನೆ ನೀಡಲು ಕಷ್ಟವಾಗುತ್ತಿದೆ. ವಿಶೇಷವಾಗಿ ನದಿ ದಂಡೆಯಲ್ಲಿ ನೆಲೆಸಿರುವವರಿಗೆ ಕಷ್ಟವಾಗುತ್ತಿದೆ. ಇನ್ನು ಮುಂದೆ ನದಿ ದಂಡೆಯಲ್ಲಿ ಬಿಡಲ್ಲ; ಬೇರೆ ಜಾಗ

ಈ ಬಾರಿ ಭಾಗಮಂಡಲ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾದ ಕಾರಣ ಪ್ರವಾಹ ಪರಿಸ್ಥಿತಿ ಉಂಟಾಗಿ ನದಿ ತೀರದ ಪ್ರದೇಶಗಳಿಗೆ ಪ್ರವಾಹದ ನೀರು ನುಗ್ಗಿ ಸಾಕಷ್ಟು ಕಷ್ಟ - ನಷ್ಟಗಳಾಗಿವೆ. ನೆಲ್ಲಿಹುದಿಕೇರಿ, ಕರಡಿಗೋಡು, ಕಟ್ಟೆಮಾಡು, ಪರಂಬು ಪೈಸಾರಿ, ಚೆರಿಯಪರಂಬು ಮುಂತಾದೆಡೆ ಪ್ರತಿ ವರ್ಷ ಪ್ರವಾಹ ತಲೆದೋರುತ್ತಿದೆ. ಮಳೆ ಬಂದಾಗ ಸ್ಥಳಾಂತರ, ಹಾನಿ, ಪರಿಹಾರ ಕೊಡುವದೇ ಆಗಿದೆ. ಇದರಿಂದ ಅಲ್ಲಿನ ನಿವಾಸಿಗಳಿಗೂ ನೆಮ್ಮದಿ ಇಲ್ಲದಂತಾಗಿದೆ. ಹಾಗಾಗಿ ನದಿ ದಂಡೆÀಗಳಲ್ಲಿ ನೆಲೆಸಿರುವವರಿಗೆ ಬೇರೆ ಸರಕಾರಿ ಜಾಗ ಗುರುತಿಸಿ ಸ್ಥಳಾಂತರಿಸುವ ಕೆಲಸವಾಗಬೇಕಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದ್ದಾರೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕಿದೆ; ನದಿದಂಡೆ ಅತಿಕ್ರಮಣ ಮಾಡಲು ಬಿಡಬಾರದು, ಮಾಡಿದರೆ, ಸಂಬಂಧಿಸಿದ ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿಗಳನ್ನು ಅಮಾನತುಗೊಳಿಸುವ ಬಿಗಿ ವ್ಯವಸ್ಥೆ ಜಾರಿಗೊಂಡರೆ ಇದು ಸಾಧ್ಯವಾಗಲಿದೆ ಎಂದರು.

ಕೊಡಗಿನ ಹಣ ಬಂದಿಲ್ಲ

ಕಳೆದ ವರ್ಷ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರ ಪರಿಹಾರ ನಿಧಿಗೆ ಕೊಡಗಿಗೆಂದು ಬಂದ ಹಣ ಬಿಡುಗಡೆಯಾಗಿಲ್ಲ.

ಮುಖ್ಯಮಂತ್ರಿಗಳ ಗಮನಕ್ಕೆ

ಜಿಲ್ಲೆಯಾದ್ಯಂತ ಪ್ರವಾಹ ಪರಿಸ್ಥಿತಿ ಕಡಿಮೆಯಾಗಿದ್ದರೂ ಇನ್ನೂ ಸಂತ್ರಸ್ತರು ಹಾಗೇ ಇದ್ದಾರೆ. ನೆಲ್ಲಿಹುದಿಕೇರಿ ವ್ಯಾಪ್ತಿಯಲ್ಲಿರುವ ಸಂತ್ರಸ್ತರಿಗೆ ಬಾಡಿಗೆ ಮನೆಗಳು ಸಿಗುತ್ತಿಲ್ಲದ ಕಾರಣ ಮನೆ ಸಿಗುವವರೆಗೆ ಪರಿಹಾರ ಕೇಂದ್ರದಲ್ಲಿಯೇ ಉಳಿದುಕೊಳ್ಳುವ ತೀರ್ಮಾನ ಕೈಗೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಸರಿಯಾದ ಕ್ರಮ ಕೈಗೊಳ್ಳಬೇಕಿದೆ ಎಂದು ವಿಧಾನಪರಿಷತ್ತು ಸದಸ್ಯೆ ವೀಣಾ ಅಚ್ಚಯ್ಯ ಅಭಿಪ್ರಾಯಿಸಿದ್ದಾರೆ.

ವಿಕೋಪ ಉಂಟಾದ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿದ್ದು; ಮಾಹಿತಿ ಸಂಗ್ರಹಿಸಿದ್ದೇನೆ. ರಾಜ್ಯ ನಾಯಕರ ಮೂಲಕ ಸಮಗ್ರ ಮಾಹಿತಿಯನ್ನು ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೆ ತರುವದಾಗಿ ಅವರು ಹೇಳಿದರು. ಅಲ್ಲದೆ, ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಲಿದ್ದು, ಅವರ ಗಮನಕ್ಕೂ ತರುವದಾಗಿ ಹೇಳಿದ ಅವರು, ಒಂದು ವಾರದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗುವದಾಗಿ ತಿಳಿಸಿದರು. ಸಂತ್ರಸ್ತರಾದವರಿಗೆ ಕಳೆದ ಬಾರಿಯ ಹಾಗೆ ಸ್ಪಂದನ ದೊರಕಬೇಕಿದೆ; ಆದರೆ ಕಳೆದ ವರ್ಷ ಸಂತ್ರಸ್ತರಾದವರಿಗೆ ಮನೆ ನೀಡಲಾಗದೇ ಇರುವದನ್ನು ಒಪ್ಪಿಕೊಳ್ಳುವದಾಗಿ ಇದೇ ಸಂದರ್ಭದಲ್ಲಿ ಹೇಳಿದರು. (ಮೊದಲ ಪುಟದಿಂದ) ಗುರುತಿಸಿ ನಿವೇಶನ ನೀಡಲಾಗುವದು. ಅಲ್ಲಿಯವರೆಗೆ ಮನೆ ಬಾಡಿಗೆ ನೀಡಲಾಗುವದೆಂದು ಹೇಳಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ಕೂಡಲೇ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರದ ಸಭೆ ಕರೆದಿದ್ದು; ತಕ್ಷಣಕ್ಕೆ ರೂ. 536 ಕೋಟಿ ಹಣ ಮಂಜೂರು ಮಾಡಿದ್ದು; ಈ ಪೈಕಿ ಈಗಾಗಲೇ ರೂ. 100 ಕೋಟಿ ಬಿಡುಗಡೆ ಆಗಿದೆ ಎಂದು ಹೇಳಿದರು. ವಿಕೋಪ ಉಂಟಾದ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಹಗಲು - ರಾತ್ರಿಯೆನ್ನದೆ ಪ್ರಾಮಾಣಿಕವಾಗಿ ದುಡಿದಿದ್ದಾರೆ. ವಿದ್ಯುತ್ ವ್ಯವಸ್ಥೆಗೆ ಹಾನಿಯಾಗುತ್ತಿದ್ದರೂ ಎಲ್ಲರೂ ಜೊತೆಗೆ ಇದ್ದುಕೊಂಡು ಸಹಕಾರ ನೀಡಿದ್ದಾರೆಂದು ಸ್ಮರಿಸಿಕೊಂಡರು.(ಮೊದಲ ಪುಟದಿಂದ) ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ಕೂಡಲೇ ಪ್ರಾಧಿಕಾರದ ಪ್ರಥಮ ಸಭೆ ಕರೆದು ರೂ. 530 ಕೋಟಿ ಮಂಜೂರು ಮಾಡಿದ್ದಾರೆ. ಇದು ಸಮರ್ಪಕವಾಗಿ ಉಪಯೋಗವಾಗಬೇಕಿದೆ. ಪ್ರಾಧಿಕಾರಕ್ಕೆ ವಿಶೇಷ ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳನ್ನು ನೇಮಕ ಮಾಡಿ ಆದಷ್ಟು ಶೀಘ್ರ ಕಾರ್ಯೋನ್ಮುಖವಾಗಬೇಕಿದೆ. ಈ ನಿಟ್ಟಿನಲ್ಲಿ ಚಿಂತನೆ ಮಾಡಬೇಕೆಂದರು. ಮೈಸೂರು, ಮಂಡ್ಯ, ಬೆಂಗಳೂರು, ತಮಿಳುನಾಡಿಗೆ ನೀರುಣಿಸುವ ಕೊಡಗಿಗೆ ಹೆಚ್ಚಿನ ಅನುದಾನ ಒದಗಿಸಬೇಕು, ಇಲ್ಲಿನ ಜನತೆ ಸಂಕಷ್ಟಕ್ಕೆ ಒಳಗಾಗುತ್ತಿದ್ದು; ‘ಮನೆಗೆ ಮಾರಿ ಊರಿಗೆ ಉಪಕಾರಿ’ ಎಂಬಂತಾಗಿದೆ ಇಲ್ಲಿನ ಪರಿಸ್ಥಿತಿ ಎಂದು ವಿಷಾದಿಸಿದರು. ವಿಕೋಪ ಸಂದರ್ಭದಲ್ಲಿ ಅಧಿಕಾರಿಗಳ ಕಾರ್ಯವೈಖರಿಗೆ ಧನ್ಯವಾದ ಹೇಳಿದ ಶಾಸಕರು, ಇನ್ನು ಮುಂದೆಯೂ ಚುರುಕುತನದಿಂದ ಕೆಲಸ ಮಾಡುವಂತಾಗಬೇಕೆಂದರು.