ವೀರಾಜಪೇಟೆ, ಆ. 28: ಬಿ.ಸಿ. ಪ್ರೌಢಶಾಲೆ, ದೇವಣಗೇರಿಯಲ್ಲಿ 2019-20ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುವ ದತ್ತಿನಿಧಿ ವಿತರಣಾ ಸಮಾರಂಭವನ್ನು ಶಾಲಾ ಅಧ್ಯಕ್ಷ ಮುಕ್ಕಾಟಿರ ಬಿ. ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಿ.ಎಸ್. ಮಚ್ಚಡೋ ಕಾರ್ಯಕ್ರಮ ಉದ್ಘಾಟಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಶಾಲೆಯ ಆಡಳಿತ ಮಂಡಳಿಯವರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅವಿನಾಭಾವ ಸಂಬಂಧದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷ ಮುಕ್ಕಾಟಿರ ಬಿ. ನಾಣಯ್ಯ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಚೇಂದಂಡ ಪೊನ್ನಪ್ಪ, ಕಾರ್ಯನಿರ್ವಾಹಕ ಕರ್ನಂಡ ಎನ್. ಬೊಳ್ಳಮ್ಮ, ಖಜಾಂಚಿ ಅಲ್ಲಪಂಡ ಎ. ಉತ್ತಪ್ಪ, ಆಡಳಿತಾಧಿಕಾರಿ ಪಿ.ಎ. ಲಕ್ಷ್ಮಿ ನಾರಾಯಣ, ಸದಸ್ಯರುಗಳಾದ ಬೀನಂಡ ಎಸ್. ಪೂಣಚ್ಚ, ಪುಗ್ಗೇರ ಪಿ. ನಂದಾ ಗಣಪತಿ, ಸಹ ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದ ಸರ್ವರನ್ನು ಮುಖ್ಯ ಶಿಕ್ಷಕ ಹೆಚ್.ಡಿ. ಲೋಕೇಶ್ ಪಾಲ್ಗೊಂಡಿದ್ದರು.
ಶಿಕ್ಷಕಿ ವೈ. ಪ್ರಮೀಳ ಕುಮಾರಿ ನಿರೂಪಿಸಿ, ಶಿಕ್ಷಕ ವಿ.ಆರ್. ಸಂದೀಪ್ ವಂದನಾರ್ಪಣೆ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಉದಾರ ಸಹಾಯ
ವಲಯ ಮಟ್ಟದ ಕ್ರೀಡಾಕೂಟಕ್ಕೆ ದೇವಣಗೇರಿ ಗ್ರಾಮದ ಪ್ಲಾಂಟರ್ಸ್ ಕ್ಲಬ್ ವತಿಯಿಂದ ಕ್ರೀಡಾಕೂಟ ಯಶಸ್ವಿಯಾಗಲು ರೂ. 10 ಸಾವಿರ ನೀಡಿದ್ದಾರೆ.