ಪೊನ್ನಂಪೇಟೆ, ಆ. 28: ವಯೋಸಹಜ ಅನಾರೋಗ್ಯ ದಿಂದಾಗಿ ಮಂಗಳವಾರದಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಕರ್ನಾಟಕದ ಹಿರಿಯ ರಾಜಕೀಯ ಮುತ್ಸದ್ಧಿ ಅಜ್ಜಿಕುಟ್ಟೀರ ಕಾರ್ಯಪ್ಪ ಸುಬ್ಬಯ್ಯ (ಎ.ಕೆ.ಸುಬ್ಬಯ್ಯ -86) ಅವರ ಅಂತ್ಯಕ್ರಿಯೆ ಬುಧವಾರದಂದು ಹುದಿಕೇರಿ ಸಮೀಪದ ಕೋಣಗೇರಿ ಯಲ್ಲಿರುವ ಕಲ್ಲುಗುಂಡಿ ಎಂಬ ಹೆಸರಿನ ಅವರ ನೆಚ್ಚಿನ ಕಾಫಿ ತೋಟದಲ್ಲಿ ಕೊಡವ ಸಾಂಪ್ರದಾಯ ದಂತೆ ನೆರವೇರಿತು.ಎ.ಕೆ. ಸುಬ್ಬಯ್ಯ ಅವರ ಮೂವರು ಪುತ್ರರು ಅಮೆರಿಕಾ ಹಾಗೂ ಕೆನೆಡಾದಿಂದ ಬೆಂಗಳೂರಿಗೆ ಬಂದ ನಂತರ ಪಾರ್ಥಿವ ಶರೀರವನ್ನು ಬುಧವಾರ ಮುಂಜಾನೆ ಬೆಂಗಳೂರಿನಿಂದ ರಸ್ತೆ ಮಾರ್ಗದ ಮೂಲಕ ತರಲಾ ಯಿತು. ಈ ಸಂದರ್ಭ ಮಂಡ್ಯ ಸಂಜಯ್ ಸರ್ಕಲ್ನಲ್ಲಿ ಕೆಲಕಾಲ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಸುಬ್ಬಯ್ಯ ಅವರ ಅಭಿಮಾನಿಗಳು ದರ್ಶನ ಪಡೆದು ಬೀಳ್ಕೊಟ್ಟರು. ನಂತರ ಮೈಸೂರಿನ ಇಲವಾಲದಲ್ಲಿ ಸಾರ್ವಜನಿಕರು ದರ್ಶನ ಪಡೆದರು. ಬಳಿಕ ನೇರವಾಗಿ ಕೊಡಗಿನ ಬೆಳ್ಳೂರಿನ ಅವರ ನಿವಾಸಕ್ಕೆ ಬೆಳಿಗ್ಗೆ 9.30 ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತು.ತಮ್ಮ ಪತ್ನಿಯ ಸಮಾಧಿ ಸ್ಥಳದ ಸಮೀಪದಲ್ಲೆ ಸಜ್ಜುಗೊಳಿಸಲಾಗಿದ್ದ ಚಿತೆಯಲ್ಲಿ ಸುಬ್ಬಯ್ಯ ಅವರ ಪಾರ್ಥಿವ ಶರೀರವನ್ನು ಇರಿಸಿದ ಬಳಿಕ ಅವರ ಹಿರಿಯ ಪುತ್ರ ನರೇನ್ ಕಾರ್ಯಪ್ಪ ಅಗ್ನಿಸ್ಪರ್ಶ ಮಾಡುವ ಮೂಲಕ ವಿಧಿ ವಿಧಾನ ಪೊರೈಸಿದರು. ಈ ವೇಳೆ ಹಾಜರಿದ್ದ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಸುಬ್ಬಯ್ಯ ಅವರ ಬಹುಕಾಲದ ಹೋರಾಟದ ಸಂಗಾತಿಗಳು `ಕಟ್ಟುತ್ತೇವ ನಾವು ಕಟ್ಟುತ್ತೇವ ನಾವು'ಎಂಬ ಕ್ರಾಂತಿಗೀತೆ ಹಾಡುವ ಮೂಲಕ ಅಂತಿಮ ವಿದಾಯ ಹೇಳಿದರು.
ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಎ.ಕೆ. ಸುಬ್ಬಯ್ಯ ಅವರ ಚಿತೆಗೆ
(ಮೊದಲ ಪುಟದಿಂದ) ಅಗ್ನಿಸ್ಪರ್ಶ ಮಾಡುವವರೆಗೆ ಸ್ಥಳದಲ್ಲೆ ಇದ್ದರು. ಇದಕ್ಕೂ ಮೊದಲು ಒಂದು ಕಿ.ಮೀ ದೂರ ಅಂತ್ಯಕ್ರಿಯೆ ಸ್ಥಳಕ್ಕೆ ತುಂತುರು ಮಳೆಯ ನಡುವೆ ಇಬ್ಬರು ನಡೆದುಕೊಂಡು ಬಂದದ್ದು ವಿಶೇಷವಾಗಿತ್ತು. ಅಂತ್ಯಕ್ರಿಯೆ ವೇಳೆ ರಾಜ್ಯಾದ್ಯಂತ ಸದ್ದು ಮಾಡಿದ್ದ ದಿಡ್ಡಳ್ಳಿ ಸಂತ್ರಸ್ತರು, ಹೋರಾಟಗಾರರು ಹಾಗೂ ಗಿರಿಜನರು ಇದ್ದರು.
ಮಾಜಿ ಸಚಿವ ಯು.ಟಿ ಖಾದರ್, ಮಾಜಿ ಶಾಸಕ ಹೆಚ್ ವಿಶ್ವನಾಥ್, ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ ಬೋಪಯ್ಯ, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಮಾಜಿ ಶಾಸಕಾರದ ಕೆ.ಎಂ ಇಬ್ರಾಹಿಂ ಮಾಸ್ಟರ್, ಅರುಣ್ ಮಾಚಯ್ಯ, ಹಿರಿಯ ಸಾಹಿತಿ ದೇವನೂರು ಮಹಾದೇವ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸಿರಿಮನೆ ನಾಗರಾಜ್, ನೂರ್ ಶ್ರೀಧರ್, ನಿರ್ವಾಣಪ್ಪ ಜನಶಕ್ತಿ ಸಂಘಟನೆಯ ಮಲ್ಲಿಗೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ಕುಮಾರ್, ಸಿಪಿಐಎಂ ಜಿಲ್ಲಾ ಕಾರ್ಯ ದರ್ಶಿ ದುರ್ಗಾಪ್ರಸಾದ್, ಜಿಪಂ ಮಾಜಿ ಅಧ್ಯಕ್ಷೆ ದೀರ್ಘಕೇಶಿ ಶಿವಣ್ಣ, ಕೋಮು ಸೌಹಾರ್ದ ವೇದಿಕೆಯ ಕೆ.ಎಲ್ ಅಶೋಕ್, ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಅಮೀನ್ ಮೊಹಿಸಿನ್, ಪ್ರಮುಖರಾದ ವಿ.ಪಿ ಶಶಿಧರ್, ಟಿ.ಹೆಚ್ ಅಬೂಬಕ್ಕರ್, ಕೆ.ಆರ್ ವಿದ್ಯಾಧರ್, ಪಿ.ಸಿ ಹಸೈನಾರ್ ಹಾಜಿ, ಉಸ್ಮಾನ್ ಹಾಜಿ, ಕಾವೇರಿ, ಡಾ. ವಾಸು, ಕಂದೇಗಾಲ ಶ್ರೀನಿವಾಸ್, ಪಿ.ಆರ್ ಭರತ್, ಕೆ.ಎಂ ಗಣೇಶ್, ಹಿರಿಯ ವಕೀಲ ಎಂ.ಕೆ. ಪೂವಯ್ಯ, ಎಸ್ ಎಸ್ಎಫ್ ಸಂಘಟನೆಯ ಪ್ರಮುಖರಾದ ಆಫೀಲ್ ಸಹದಿ, ಜಿಪಂ ಸದಸ್ಯ ಶಿವು ಮಾದಪ್ಪ ಚೆಕ್ಕೇರ ಸೋಮಯ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಸಂತಾಪ ಸಭೆ
ಪೊನ್ನಂಪೇಟೆ ವಕೀಲರ ಸಂಘದ ವತಿಯಿಂದ ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಈ ಸಂದರ್ಭ ವಕೀಲ ಎಂ.ಟಿ. ಕಾರ್ಯಪ್ಪ ಮಾತನಾಡಿ ಪೊನ್ನಂಪೇಟೆ ನೂತನ ನ್ಯಾಯಾಲಯ ಪ್ರಾರಂಭವಾಗಲು ಸುಬ್ಬಯ್ಯ ಅವರ ಸಹಕಾರ ಅಪಾರ ಎಂದರು.
ಪೊನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷರಾದ ಎಸ್.ಡಿ. ಕಾವೇರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂತಾಪ ಸಭೆಯಲ್ಲಿ ಸಂಘದ ಕಾರ್ಯದರ್ಶಿ ಎಂ.ಜಿ.ರಾಕೇಶ್, ವಕೀಲರಾದ ಕೆ.ಪಿ. ಬೋಪಣ್ಣ, ಎಂ.ಸಿ. ಪೂವಣ್ಣ, ಜಿ.ಎಸ್.ಜೀವನ್, ಸಿ.ಬಿ.ಅನಿತ, ಟಿ.ಎಂ. ಅಣ್ಣಯ್ಯ, ವಿ.ಜಿ. ಮಂಜುನಾಥ್, ವಿ.ಎಸ್. ಸುರೇಶ್, ಎಂ.ಎಸ್. ಕಾಶಿಯಪ್ಪ, ಕೆ.ಬಿ. ಸಂಜೀವ್, ಕೆ.ಜಿ. ಅಪ್ಪಣ್ಣ, ಸುನೀಲ್ ಪಿ.ಕೆ. ರವೀಂದ್ರ, ಮೋನಿ ಪೊನ್ನಪ್ಪ, ಬಿ.ಎಂ. ಅಯ್ಯಪ್ಪ ಹಾಗೂ ಪ್ರತಿಷ್ಟಾ ಇದ್ದರು.
ಸಿದ್ದಾಪುರ: ಎ.ಕೆ. ಸುಬ್ಬಯ್ಯ ಅವರ ನಿಧನಕ್ಕೆ ಸಿದ್ದಾಪುರದ ಅಂಗಡಿ ಮುಂಗಟ್ಟುಗಳನ್ನು ಮಧ್ಯಾಹ್ನ 2 ರಿಂದ 2.30ರ ವರೆಗೆ ಸ್ವಯಂ ಪ್ರೇರಿತವಾಗಿ ಮುಚ್ಚಿ ಸಂತಾಪ ವ್ಯಕ್ತಪಡಿಸಲಾಯಿತು. ಸಿದ್ದಾಪುರ ಸಮಾನ ಮನಸ್ಕರ ವೇದಿಕೆಯ ವತಿಯಿಂದ ಸ್ಥಳೀಯ ಪಂಚಾಯಿತಿ ಸಭಾಂಗಣದಲ್ಲಿ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಯಿತ್ತು. ಈ ಸಂದರ್ಭ ಪ್ರಮುಖರಾದ ಎಂ.ಎಸ್ ವೆಂಕಟೇಶ್, ಉಸ್ಮಾನ್ ಹಾಜಿ, ಎನ್.ಡಿ. ಕುಟ್ಟಪ್ಪ, ಪಿ.ಆರ್. ಭರತ್, ಹೆಚ್.ಬಿ. ರಮೇಶ್, ರೆಜಿತ್ಕುಮಾರ್, ಬಷೀರ್, ಶುಕೂರ್, ಮೂಸ ಸೇರಿದಂತೆ ಇನ್ನಿತರರು ಇದ್ದರು. -ರಫೀಕ್