ನಾಪೆÉÇೀಕ್ಲು, ಆ. 28: ಸಮೀಪದ ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ಯುವಕ ಸಂಘದ ವತಿಯಿಂದ 4 ನೇ ವರ್ಷದ ಕೈಲ್ ಮುಹೂರ್ತ ಕ್ರೀಡಾ ಕೂಟವು ತಾ. 29 ರಂದು (ಇಂದು) ಬೇತು ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.

ಕ್ರೀಡಾ ಕೂಟದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕಾಳೇಯಂಡ ರಿನೆಶ್ ಪೆÇನ್ನಪ್ಪ ವಹಿಸುವರು. ಮುಖ್ಯ ಅತಿಥಿಗಳಾಗಿ ಅಂತರರಾಷ್ಟ್ರೀಯ ಹಾಕಿ ತೀರ್ಪುಗಾರ್ತಿ ಮುಂಡಂಡ ಅನುಪಮ ಮಂದಣ್ಣ, ಉದ್ಯಮಿ ಮತ್ತು ಹಾಕಿ ಕರ್ನಾಟಕ ಉಪಾಧ್ಯಕ್ಷ ಅರೆಯಡ ಪವೀನ್ ಪೆÇನ್ನಣ್ಣ ಆಗಮಿಸಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬೊಳ್ಳೇಪಂಡ ನಿತಿನ್ ನಂಜಪ್ಪ ತಿಳಿಸಿದ್ದಾರೆ.