ಚೆಟ್ಟಳ್ಳಿ, ಆ. 28: ನಾಪೋಕ್ಲು ಸಮೀಪದ ಕೊಳಕೇರಿಯ ಬಡ ಕುಟುಂಬಕ್ಕೆ ಕೊಡಗು ಜಿಲ್ಲಾ ಎಸ್.ವೈ.ಎಸ್. ವತಿಯಿಂದ ಮನೆ ನಿರ್ಮಿಸಿ ಕೊಡಲಾಗಿದ್ದು, ಉದ್ಘಾಟನೆಯನ್ನು ರಾಜ್ಯ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಶಾಫಿ ಸಹದಿ ನೆರವೇರಿಸಿದರು.

ನಂತರ ಮಾತನಾಡಿದ ಶಾಫಿ ಸಹದಿ, ಸುನ್ನಿ ಯುವ ಜನ ಸಂಘ , ಇತರೆ ಸುನ್ನಿ ಕುಟುಂಬಗಳ ಸಹಾಯದಿಂದ ಸಾಂತ್ವನ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡು, ಬಡ ಕುಟುಂಬಗಳಿಗೆ ಸೂರು ಕಲ್ಪಿಸುವ ಕೆಲಸ ಮಾಡುತಿದ್ದೇವೆ ಎಂದರು.

ಈ ಸಂದರ್ಭ ರಾಜ್ಯ ಸುನ್ನಿ ಯವಜನ ಸಂಘ ಕಾರ್ಯದರ್ಶಿ ಡಾ. ಅಬ್ದುಲ್ ರಶೀದ್ ಝೈನಿ, ಜಿಲ್ಲಾ ಎಸ್.ವೈ.ಎಸ್. ಅಧ್ಯಕ್ಷ ಹಫೀಲ್ ಸಹದಿ, ಯೂಸುಫ್ ಕೊಂಡಂಗೇರಿ, ಅಬ್ದುಲ್ ಹಕೀಂ , ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಅಬುಸುಫಿಯಾನ್ ಮದನಿ, ಕೊಳಕೇರಿ ಜಮಾಅತ್ ಅಧ್ಯಕ್ಷ ಟಿ.ಎಚ್ ಅಹ್ಮದ್, ಹನೀಫ್ ರಹ್ಮಾನಿ,ಇದ್ದರು.