ಮಡಿಕೇರಿ, ಆ. 27: ಬೆಂಗಳೂರು ವಲಯ ಸೇನಾ ನೇಮಕಾತಿ ಕಚೇರಿ ಯಿಂದ ಸೆ. 29 ರಿಂದ ಅಕ್ಟೋಬರ್ 4 ರವರೆಗೆ ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದ ಭಾರತೀಯ ಸೇನಾ ನೇಮಕಾತಿ ರ್ಯಾಲಿಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಈ ನೇಮಕಾತಿ ರ್ಯಾಲಿಯು ಅಕ್ಟೋಬರ್ 13 ರಿಂದ ಅಕ್ಟೋಬರ್ 19 ರವರೆಗೆ ನಡೆಯಲಿದೆ.

ಸೇನಾ ನೇಮಕಾತಿ ರ್ಯಾಲಿಗೆ ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ದಿನಾಂಕ ವನ್ನು ಸೆ 29 ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಸಿ. ಜಗನ್ನಾಥ್ ತಿಳಿಸಿದ್ದಾರೆ.