ಮಡಿಕೇರಿ, ಆ. 27: ಕನ್ನಡ ಸಾಹಿತ್ಯ ಪರಿಷತ್ತು ಸಂಪಾಜೆ ಹೋಬಳಿ ಘಟಕದ ಸಭೆಯನ್ನು ಇತ್ತೀಚೆಗೆ ಸಂಪಾಜೆ ಪಯಶ್ವಿನಿ ಸಹಕಾರಿ ಸದನದಲ್ಲಿ ಕ.ಸಾ.ಪ. ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು.
ಸಭೆಯಲ್ಲಿ ಹೋಬಳಿ ಮಟ್ಟದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಮತ್ತು ಕೋಶಾಧಿಕಾರಿಯನ್ನು ಆಯ್ಕೆ ಮಾಡಲಾಯಿತು. ಸಂಪಾಜೆ ಹೋಬಳಿ ಘಟಕ ಕ.ಸಾ.ಪ. ಸಮಿತಿಯ ಅಧ್ಯಕ್ಷರಾಗಿ ಅನಂತ ಊರುಬೈಲು, ಅಧ್ಯಕ್ಷರು ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘ ಸಂಪಾಜೆ, ಕಾರ್ಯದರ್ಶಿಯಾಗಿ ಬಿ.ಜೆ. ಯಶೋಧರ, ಯಕ್ಷಗಾನ ಭಾಗವತರು ಮತ್ತು ಸಹನಾ ಕಾಂತಬೈಲು, ಸಾಹಿತಿಗಳು ಹಾಗೂ ಕೋಶಾಧಿಕಾರಿಯಾಗಿ ಕುಮಾರ್ ಚೆದ್ಕಾರ್, ಅಧ್ಯಕ್ಷರು, ಗ್ರಾಮ ಪಂಚಾಯಿತಿ ಸಂಪಾಜೆ, ಗೌರವ ಸಲಹೆಗಾರರಾಗಿ ನಿವೃತ್ತ ಶಿಕ್ಷಕ ವೆಂಕಪ್ಪ ಮಾಸ್ತರ್ ಮತ್ತು ಜಿಲ್ಲಾ ಸಮಿತಿ ಸದಸ್ಯರಾಗಿ ಲೋಕನಾಥ್ ಅಮೆಚೂರ್, ಮಾಜಿ ನಿರ್ದೇಶಕರು ಪಯಸ್ವಿನಿ ಸಂಘ ಹಾಗೂ ಕಾರ್ಯಕಾರಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಂದರ ಬಿಸಿಲುಮನೆ, ನಿವೃತ್ತ ಶಿಕ್ಷಕ ಇಬ್ರಾಹಿಂ ಮಾಸ್ತರ್, ಜಾನಪದ ಕಲಾವಿದ ದೇವಪ್ಪ ಕೊಯನಾಡು, ಲೋಕನಾಥ್ ಅಮೆಚೂರ್ ಹಾಗೂ ಸಾಹಿತಿಗಳು ಉಪಸ್ಥಿತರಿದ್ದರು.