ಗೋಣಿಕೊಪ್ಪಲು, ಆ. 27: ವೀರಾಜಪೇಟೆ ತಾಲೂಕಿನ ಬಹುತೇಕ ಗ್ರಾಮೀಣ ಭಾಗದ ಪರಿಶಿಷ್ಟ ವರ್ಗದ ಜನಾಂಗ ಇತ್ತೀಚೆಗೆ ಮತಾಂತರಗೊಳ್ಳುತ್ತಿದ್ದು ಇದನ್ನು ಹತೋಟಿಗೆ ತರಲು ಹಿಂದೂಪರ ಸಂಘಟನೆಗಳು ಹರಸಾಹಸ ಪಡುತ್ತಿವೆ. ಆದರೂ ಕೆಲವು ಆಮಿಷಗಳಿಗೆ ಬಲಿಯಾದ ಬಡ ಜನತೆ ನಿರಂತರ ಮತಾಂತರಗೊಳ್ಳುತ್ತಿದ್ದಾರೆ.ಗೋಣಿಕೊಪ್ಪ ನಗರದಲ್ಲಿಯೂ ಈ ಮತಾಂತರ ನಡೆಯುತ್ತಿದ್ದು ಕೆಲ ಪೌರ ಕಾರ್ಮಿಕರು ಮತಾಂತರಗೊಂಡಿದ್ದಾರೆ.
ಮತಾಂತರಗೊಂಡವರಿಗೆ ಗೋಣಿಕೊಪ್ಪಲುವಿನ ಹಿಂದೂ ರುದ್ರಭೂಮಿಯಲ್ಲಿ ಶವಸಂಸ್ಕಾರಕ್ಕೆ ಅವಕಾಶ ದೊರಕುತ್ತಿಲ್ಲ. ಆದರೂ ಮತಾಂತರಗೊಂಡವರು ಹಿಂದೂ ರುದ್ರಭೂಮಿಯಲ್ಲಿ ಶವಸಂಸ್ಕಾರಕ್ಕೆ ಮುಂದಾದಾಗ ಇಲ್ಲಿನ ಹಿಂದೂಪರ ಸಂಘಟನೆಯ ಪ್ರಮುಖರು ಪ್ರಬಲವಾಗಿ ವಿರೋಧಿಸುವ ಮೂಲಕ ಮತಾಂತರಗೊಂಡವರಿಗೆ ಎಚ್ಚರಿಕೆಯ ಸಂದೇಶ ನೀಡಿದರು.
ಕಳೆದ ಮೂರು ವರ್ಷಗಳ ಹಿಂದೆ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಗೋಣಿಕೊಪ್ಪಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ
ಕೆಲವು ಕ್ರೈಸ್ತಧರ್ಮ ಪ್ರಚಾರಕರ ಆಮಿಷಗಳಿಗೆ ಮರುಳಾಗಿ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರು ಮರಣದ ನಂತರ ಇತ್ತ ಹಿಂದೂ ಧರ್ಮದಲ್ಲೂ ಸಲ್ಲದೆ ಅತ್ತ ಕ್ರೈಸ್ತ ಧರ್ಮಕ್ಕೂ ಸಲ್ಲದೇ ಅಂತ್ಯ ಸಂಸ್ಕಾರ ಮಾಡಲು ಸ್ಮಶಾನ ಸಿಗದೆ ಪರದಾಡುವದು ಸಾಮಾನ್ಯವಾಗಿದೆ. ಇದರಿಂದ ಅಮಾಯಕರು ಅಂತ್ಯ ಸಂಸ್ಕಾರ ಸಂದರ್ಭ ಬೇರೆಡೆಗೆ ಹೋಗುವಂತಹ ಪ್ರಮೇಯ ಬಂದೊದಗಿದೆ. ಗೋಣಿಕೊಪ್ಪಲು ಹಿಂದೂಪರ ಸಂಘಟನೆಯ ಕಾರ್ಯಕರ್ತರಾದ ಸುರೇಶ್‍ರೈ, ಪ್ರಶಾಂತ್, ಭರತ್, ಶ್ರೀನಿ, ಅನಿಯನ್, ಮಂಜುರೈ, ಸತೀಶ್, ಮನು, ರಂಜಿತ್, ಸಾರ್ವಜನಿಕರು ಪ್ರತಿಭಟಿಸಿದರು. ಬಳಿಕ ಮಡಿಕೇರಿ ಭಾಗದಲ್ಲಿ ಅಂತ್ಯಕ್ರಿಯೆ ನೆರವೇರಿರುವದಾಗಿ ತಿಳಿದು ಬಂದಿದೆ. -ಹೆಚ್.ಕೆ.ಜಗದೀಶ್