ಮಡಿಕೇರಿ, ಆ. 27: ಭಾರತೀಯ ಅಂಚೆ ಇಲಾಖೆ, ಕರ್ನಾಟಕ ಅಂಚೆ ವೃತ್ತವು ಕರ್ನಾಟಕದಲ್ಲಿರುವ 2637 ಗ್ರಾಮೀಣ ಅಂಚೆ ನೌಕರರ ಹುದ್ದೆ ತುಂಬಲು ಆನ್‍ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

10ನೇ ತರಗತಿ ತೇರ್ಗಡೆ ಹೊಂದಿರಬೇಕು ಹಾಗೂ ಕನಿಷ್ಟ 60 ದಿನಗಳ ಕಂಪ್ಯೂಟರ್ ತರಬೇತಿಯ ಪ್ರತಿಷ್ಠಿತ ಸಂಸ್ಥೆಯ ಪ್ರಮಾಣ ಪತ್ರ ಹೊಂದಿರಬೇಕು. ಸ್ಥಳೀಯ ಭಾಷೆ ಕನ್ನಡವನ್ನು 10ನೇ ತರಗತಿಯವರೆಗೆ ಒಂದು ವಿಷಯವನ್ನಾಗಿ ಕಡ್ಡಾಯವಾಗಿ ಓದಿರಬೇಕು.

ವಯೋಮಿತಿ 18 ರಿಂದ 40 ವರ್ಷ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ 5 ವರ್ಷ, ಹಿಂದುಳಿದ ವರ್ಗ 3 ವರ್ಷ, ಅಂಗವಿಕಲರು 10 ವರ್ಷ, ಅಂಗವಿಕಲರು ಮತ್ತು ಹಿಂದುಳಿದ ವರ್ಗ 13 ವರ್ಷ, ಅಂಗವಿಕಲರು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ 15 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ ಸಾಮಾನ್ಯ, ಒಬಿಸಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ರೂ. 100 ಶುಲ್ಕವಿರುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಂಗವಿಕಲ ಹಾಗೂ ಮಹಿಳಾ ವರ್ಗದವರಿಗೆ ಶುಲ್ಕವಿರುವದಿಲ್ಲ. ರಾಜ್ಯದ ಯಾವದೇ ಮುಖ್ಯ ಅಂಚೆ ಕಚೇರಿಯಲ್ಲಿ ಅಥವಾ ಆಯ್ದ ಅಂಚೆ ಕಚೇರಿಗಳಲ್ಲಿ ಶುಲ್ಕ ಪಾವತಿಸಬಹುದು. ವೆಬ್‍ಸೈಟ್ hಣಣಠಿ://ಚಿಠಿಠಿosಣ.iಟಿ/gಜsoಟಿಟiಟಿe ಅಥವಾ hಣಣಠಿs://iಟಿಜiಚಿಠಿosಣ.gov.iಟಿ ಯುಆರ್‍ಎಲ್ ಲಿಂಕ್‍ನ ಮೂಲಕ ಆನ್‍ಲೈನ್‍ನಲ್ಲಿ ಕೂಡ ಶುಲ್ಕವನ್ನು ಪಾವತಿಸಬಹುದು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 4 ಕೊನೆಯ ದಿನವಾಗಿದೆ. ಅರ್ಜಿಗಳನ್ನು ಆನ್‍ಲೈನ್ ಮುಖಾಂತರವೇ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಇಲಾಖೆಯ ವೆಬ್‍ಸೈಟ್ hಣಣಠಿ://ಚಿಠಿಠಿosಣ.iಟಿ/gಜsoಟಿಟiಟಿe ಅಥವಾ hಣಣಠಿs://iಟಿಜiಚಿಠಿosಣ.gov.iಟಿ ನ್ನು ನೋಡಬಹುದು ಎಂದು ಕೊಡಗು ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ಮ್ಯಾಕ್ಸಿ ಜಿ. ಪಿಂಟೊ ತಿಳಿಸಿದ್ದಾರೆ.