ಒಡೆಯನಪುರ, ಆ. 27: ಸಮೀಪ ಹಂಡ್ಲಿ ಕ್ಲಸ್ಟರ್ ಪ್ರಾಥಮಿಕ ಶಾಲೆಗಳ ಕಲಾ ಮಹೋತ್ಸವ ಮತ್ತು ಪ್ರತಿಭಾ ಕಾರಂಜಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಂಡ್ಲಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಿಗೆ ಬಹುಮಾನ ಪ್ರಾಯೋಜಕತ್ವ ನೀಡಿ ಮಾತನಾಡಿದ ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಎಸ್.ವಿ. ಶುಭು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಕಲೆ, ಸಾಹಿತ್ಯ, ಸಂಗೀತಕ್ಕೆ ಪೂರಕವಾದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಮತ್ತಷ್ಟು ಪ್ರತಿಭಾವಂತರಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಹೆಚ್.ಪಿ. ಚಂದನ್, ರೋಟರಿ ಸದಸ್ಯರಾದ ಎಸ್.ಸಿ. ದಯಾಕರ್, ಹಂಡ್ಲಿ ಶಾಲಾ ಮುಖ್ಯ ಶಿಕ್ಷಕಿ ಹೆಚ್.ಕೆ. ಸುಶೀಲ, ಎಸ್‍ಡಿಎಂಸಿ ಅಧ್ಯಕ್ಷ ಲೋಕೇಶ್, ದಾನಿ ಮತ್ತು ಶಿಕ್ಷಕಿ ಕವಿತ ಜಯಸ್ವಾಮಿ, ಶಿಕ್ಷಕರಾದ ಫಯಾಜ್, ಸಿ.ಕೆ. ದಿನೇಶ್, ಸುನಂದ, ರೇಖ, ಮಮತ, ಲಲಿತ ಮುಂತಾದವರು ಇದ್ದರು.