ಮಡಿಕೇರಿ, ಆ. 27: ಸಾಯಿಶಂಕರ್ ವಿದ್ಯಾಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಂಟೆಸರಿ ಹಾಗೂ 1ನೇ ತರಗತಿ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಅಯ್ಯಣ್ಣ ಗ್ಲೆನ್‍ಲೋರ ಟೀ ಎಸ್ಟೇಟ್ ಮ್ಯಾನೇಜರ್, ಶೆಟ್ಟಿಗೇರಿ ಹಾಗೂ ಇವರ ಪತ್ನಿ ಬಿಂದು ಅಯ್ಯಣ್ಣ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಬಿಂದು ಅಯ್ಯಣ್ಣ ಹಾಗೂ ಸಾಯಿಶಂಕರ್ ಕಾಲೇಜಿನ ಪ್ರಾಂಶುಪಾಲೆ ದಶಮಿ ಪಾಲ್ಗೊಂಡಿದ್ದರು.

ಈ ಸಂದರ್ಭ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಅಧ್ಯಾಪಕ ವೃಂದದವರು ಭಾಗವಹಿಸಿದ್ದರು.