ಗುಡ್ಡೆಹೊಸೂರು, ಆ. 26: ಇಲ್ಲಿಗೆ ಸಮೀಪದ ರಸಲ್‍ಪುರ ಬಾಳುಗೋಡು ಗ್ರಾಮದ ಮಜೀದ್ ಎ.ವಿ ಅವರು ಮೂರು ಎಕರೆ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಸಿದ್ದು, ಕಳೆದ ರಾತ್ರಿ ಸುಮಾರು ಮೂರು ಆನೆಗಳ ಗುಂಪು ಹೊಲಕ್ಕೆ ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆನಾಶಪಡಿಸಿವೆ.

ಮಜೀದ್ ಅವರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಅಲ್ಲದೆ ದೊಡ್ಡಬೆಟ್ಟಗೇರಿ, ಚಿಕ್ಕಬೆಟ್ಟಗೇರಿ ವಿಭಾಗದಲ್ಲಿ ಒಂಟಿ ಸಲಗವೊಂದು ದಾಳಿ ಮಾಡಿ ಅಪಾರ ಪ್ರಮಾಣದಲ್ಲಿ ಬೆಳೆಗಳನ್ನು ನಾಶಪಡಿಸುತ್ತಿರುವದಾಗಿ ಈ ವಿಭಾಗದ ರೈತರು ಪತ್ರಿಕೆಯೊಂದಿಗೆ ದೂರಿಕೊಂಡಿದ್ದಾರೆ.