ಸೋಮವಾರಪೇಟೆ, ಆ. 26: ಸಮೀಪದ ಗೌಡಳ್ಳಿ ಬಿ.ಜಿ.ಎಸ್. ಶಾಲಾ ಮೈದಾನದಲ್ಲಿ ಆಯೋಜಿಸಲಾಗಿರುವ ಪ್ರಾಥಮಿಕ ಶಾಲಾ ವಿಭಾಗದ ವಲಯಮಟ್ಟದ ಕ್ರೀಡಾಕೂಟದ ಫುಟ್ಬಾಲ್ ಪಂದ್ಯಾಟಕ್ಕೆ ಗೌಡಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಭರತ್‍ಕುಮಾರ್ ಚಾಲನೆ ನೀಡಿದರು.
ಈ ಸಂದರ್ಭ ಬಿ.ಜಿ.ಎಸ್. ಶಾಲೆಯ ಮುಖ್ಯ ಶಿಕ್ಷಕ ಗಣೇಶ್, ಕುವೆಂಪು ಶಾಲೆಯ ಮುಖ್ಯ ಶಿಕ್ಷಕಿ ಮಿಲ್‍ಡ್ರೆಡ್ ಗೊನ್ಸಾಲ್ವೆಸ್, ದೈಹಿಕ ಶಿಕ್ಷಣ ಶಿಕ್ಷಕರಾದ ಎನ್.ಎಂ.ನಾಗೇಶ್, ಶಿವಣ್ಣ, ಧರ್ಮಪ್ಪ, ಇಂದಿರಾ ಇದ್ದರು.
ಫುಟ್ಬಾಲ್‍ನಲ್ಲಿ ಗೌಡಳ್ಳಿ ಬಿ.ಜಿ.ಎಸ್. ಪ್ರಥಮ ಹಾಗೂ ಸಾಂದೀಪನಿ ಶಾಲೆ ದ್ವಿತೀಯ ಸ್ಥಾನ ಗಳಿಸಿತು.