ನಾಪೋಕ್ಲು, ಆ. 26: ಭಾಗಮಂಡಲ ಸಮೀಪದ ಕೋರಂಗಾಲ ಗ್ರಾಮದಲ್ಲಿ ಭೂಕುಸಿತದಿಂದ ಮೃತಪಟ್ಟ ಬೋಳನ ಬಾಲಕೃಷ್ಣ ಮತ್ತು ಯಮುನ ದಂಪತಿಯ ಮನೆಗೆ ಲಯನ್ಸ್ ಪದಾಧಿಕಾರಿಗಳು ಹಾಗೂ ಸದಸ್ಯರು ಭೇಟಿ ನೀಡಿ ಅವರ ಮಕ್ಕಳಿಗೆ ಸಾಂತ್ವನ ಹೇಳಿದರು. ನಾಪೋಕ್ಲು ಲಯನ್ಸ್ ಕ್ಲಬ್‍ನ ಅಧ್ಯಕ್ಷ ಚೌರೀರ ಉದಯ ಮತ್ತು ಪದಾಧಿಕಾರಿಗಳು ಸೇರಿ ರೂ. 10000ವನ್ನು ಮಕ್ಕಳಿಗೆ ನೀಡಿ ಧೈರ್ಯ ತುಂಬಿದರು.