ಕಲಾನಗರ ಸಾಂಸ್ಕøತಿಕ ಕಲಾ ವೇದಿಕೆ ವತಿಯಿಂದ 73ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.ಕಾರುಗುಂದ: ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ 73ನೇ ಸ್ವಾತಂತ್ರ್ಯೋತ್ಸವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಅಧ್ಯಕ್ಷ ನಾಪಂಡ ರ್ಯಾಲಿ ಮಾದಯ್ಯ ನೆರವೇರಿಸಿದರು. ಈ ಸಂದರ್ಭ ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಕೂಡಿಗೆ: ಕೂಡಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 73ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಕೂಡಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪ್ರೇಮಲೀಲಾ ನೆರವೇರಿಸಿದರು.
ಈ ಸಂದರ್ಭ ಗ್ರಾಮ ಪಂಚಾಯ್ತಿ ಸದಸ್ಯರಾದ ಮೋಹಿನಿ, ರತ್ನಮ್ಮ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಅನುಸೂಯ, ಶಾಲಾ ಮುಖ್ಯೋಪಾಧ್ಯಾಯಿನಿ ವಾಣಿ, ಸಹ ಶಿಕ್ಷಕರು ಸ್ಥಳೀಯರು, ವಿದ್ಯಾರ್ಥಿಗಳು ಇದ್ದರು.
ಕೂಡಿಗೆ: ಇಲ್ಲಿನ ಆಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ 73ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಶಾಲಾ ಮುಖ್ಯೋಪಾದ್ಯಾಯಿನಿ ವೀಣಾವಿಜಯ್ ನೆರವೇರಿಸಿದರು.
ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಗುರಿ ಮತ್ತು ನಿಷ್ಠೆಯ ಮೂಲಕ ಪ್ರ್ರಾಮಾಣಿಕತೆಯ ತತ್ವಗಳನ್ನು ತಿಳಿದುಕೊಂಡು ದೇಶದ ಪ್ರಗತಿಗೆ ಕೈಜೋಡಿಸುವ ಗುಣಗಳನ್ನು ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು. ಶಿಕ್ಷಕರು ದಿನದ ಮಹತ್ವವನ್ನು ಕುರಿತು ಮಾತಾಡಿದರು.
ಕೂಡಿಗೆ: ಕೂಡಿಗೆ ಗ್ರಾ.ಪಂ ವತಿಯಿಂದ ಗ್ರಾ.ಪಂ ಆವರಣದಲ್ಲಿ 73ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಧ್ವಜಾರೋಹಣವನ್ನು ಗ್ರಾ.ಪಂ ಅಧ್ಯಕ್ಷೆ ಪ್ರೇಮಾಲೀಲಾ ನೆರವೇರಿಸಿದರು.
ಈ ಸಂದರ್ಭ ಗ್ರಾ.ಪಂ ಉಪಾಧ್ಯಕ್ಷ ಕೆ.ಟಿ.ಗಿರೀಶ್ಕುಮಾರ್, ಗ್ರಾ.ಪಂನ ಸದಸ್ಯರಾದ ಕಲ್ಪನ, ಪುಷ್ಪ, ರತ್ನಮ್ಮ, ಕೃಷ್ಣ, ಮೋಹಿನಿ, ಜಯಶ್ರೀ, ಚಂದ್ರಿಕಾ, ಹೆಚ್.ಎಸ್.ರವಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅಶ್ವಿನಿ, ಕಾರ್ಯದರ್ಶಿ ಶಿಲ್ಪ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.
ಸುಂಟಿಕೊಪ್ಪ: ಗದ್ದೆಹಳ್ಳದ ವಿಕಾಸ್ ಜನ ಸೇವಾ ಟ್ರಸ್ಟ್ನ ವತಿಯಿಂದ 73ನೇ ವರ್ಷದ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ನಿವೃತ್ತ ಸೈನಿಕ ವಸಂತ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ನಮ್ಮ ಸುಂಟಿಕೊಪ್ಪ ತಂಡ ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ವಿಕಾಸ ಜನ ಟ್ರಸ್ಟ್ನಿಂದ ಆಚರಿಸಲಾದ ಸ್ವಾತಂತ್ಯೋತ್ಸವಕ್ಕೆ ಕೈ ಜೋಡಿಸಿದರು.ಜನ ವಿಕಾಸ ಟ್ರಸ್ಟ್ನ ಅಧ್ಯಕ್ಷ ರಮೇಶ, ವೃದ್ಧಾಶ್ರಮದ ಫಲಾನುಭವಿಗಳು ಸೇವಾ ಕಾರ್ಯಕರ್ತರು ಭಾಗವಹಿಸಿದ್ದರು.
ಸುಂಟಿಕೊಪ್ಪ: 7ನೇ ಹೊಸಕೋಟೆಯ ಕೂರ್ಗ್ ಕೌಂಟಿ ರೆಸಾರ್ಟ್ ವತಿಯಿಂದ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕೂರ್ಗ್ ಕೌಂಟಿಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ರೆಸ್ಟೋರೆಂಟ್ ಕ್ಯಾಪ್ಟನ್ ವಿನೋದ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಆರಿಪ್, ರಿಯಾಜ್, ಪ್ರಕಾಶ್, ಸೋಮಶೇಖರ್, ನರಸಿಂಹ ಸೇರಿದಂತೆ ರೆಸಾರ್ಟ್ ನ ಅನೇಕ ಸಿಬ್ಬಂದಿ ವರ್ಗದವರು ಹಾಜರಿದ್ದರು.
ನಗರ ಬಿಜೆಪಿ: ಮಡಿಕೇರಿ ನಗರ ಬಿಜೆಪಿ ವತಿಯಿಂದ 73 ನೇ ಸ್ವಾತಂತ್ರ್ಯ ದಿನಾಚರಣೆ ಯನ್ನ ನಗರ ಬಿಜೆಪಿ ಕಚೇರಿಯಲ್ಲಿ ಆಚರಿಸಲಾಯಿತು. ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಜಿಲ್ಲಾ ಬಿಜೆಪಿ ಉಪಾಧ್ಯಕ್ಷÀ ಬಿ.ಕೆ ಅರುಣಕುಮಾರ್ ನಗರ ಮಹಿಳಾ ಮೋರ್ಚಾದ ಅಧ್ಯಕ್ಷೆ ಅನಿತಾ ಪೂವಯ್ಯ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್ ಜಿಲ್ಲಾ ಕಾರ್ಯದರ್ಶಿ ಮನು ಮಂಜುನಾಥ್, ಯುವ ಮೋರ್ಚಾದ ದಿಶು, ಟೌನ್ ಬ್ಯಾಂಕಿನ ನಿರ್ದೇಶಕರುಗಳು, ಮಾಜಿ ನಗರ ಸಭಾ ಸದಸ್ಯರುಗಳು ಬಿಜೆಪಿ ಕಾರ್ಯ ಕಾರ್ಯಕರ್ತರು ಭಾಗವಹಿಸಿದ್ದರು.
ಶನಿವಾರಸಂತೆ : ಶನಿವಾರಸಂತೆ ಗ್ರಾ.ಪಂ. ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಗೌಸ್ ಧ್ವಜಾರೋಹಣ ಮಾಡಿದರು. ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ಗೀತಾ ಹರೀಶ್, ಸದಸ್ಯರುಗಳಾದ ಸೌಭಾಗ್ಯಲಕ್ಷ್ಮಿ, ರಜನಿ, ಉಷಾ, ಹೇಮ, ಸರ್ದಾರ್ ಅಹ್ಮದ್, ಪಾಂಡು, ಆದಿತ್ಯ, ಪಿಡಿಓ ಮೇದಪ್ಪ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜ್ಞಾನಗಂಗಾ ಶಾಲೆ: ಕುಶಾಲನಗರ ಸಮೀಪದ ಅತ್ತೂರಿನ ಜ್ಞಾನಗಂಗಾ ರೆಸಿಡೆನ್ಷಿಯಲ್ ಶಾಲೆಯಲ್ಲಿ73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಲೆಯ ಆಡಳಿತ ಮಂಡಳಿಯ ಸದಸ್ಯ ಟಿ. ಕೆ. ಸುಧೀರ್ ಧ್ವಜಾರೋಹಣ ನೆರವೇರಿಸಿದರು.
ನಂತರ ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ ಸ್ವಾತಂತ್ರ್ಯ ಭಾರತದಲ್ಲಿ ನಮ್ಮ ಕರ್ತವ್ಯವೇನು? ಅದನ್ನು ಸದುಪಯೋಗ ಪಡೆದುಕೊಂಡು ಉತ್ತಮ ಭಾರತದ ನಿರ್ಮಾಣದ ಕಡೆಗೆ ನಡೆಯೋಣ ಎಂದು ಹೇಳಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಅನಂತ ಪದ್ಮನಾಭ ಮತ್ತು ಶೋಭ ಅನಂತ ಪದ್ಮನಾಭ ಉಪಸ್ಥಿತರಿದ್ದರು. ಕನ್ನಡ ಶಿಕ್ಷಕಿ ಅನುರಾಧ ದಿನದ ಮಹತ್ವದ ಕುರಿತು ಮಾತನಾಡಿದರು. ಎನ್ಸಿಸಿ ವಿದ್ಯಾರ್ಥಿಗಳಿಂದ ಪಥಸಂಚಲನ ವಿದ್ಯಾರ್ಥಿಗಳು ದೇಶಭಕ್ತಿಗೀತೆಯನ್ನು ಹಾಡಿದರು. ಶಾಲೆಯ ಉಪಪ್ರಾಂಶುಪಾಲರು ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಭಾಗವಹಿಸಿದ್ದು, ಶಿಕ್ಷಕಿ ರಶ್ಮಿ ಕೆ. ಎಂ. ವಂದನಾರ್ಪಣೆ ಸಲ್ಲಿಸಿದರು.
ಶನಿವಾರಸಂತೆ: ಶನಿವಾರಸಂತೆಯ ಭಾರತೀ ವಿದ್ಯಾಸಂಸ್ಥೆ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರಸಂತೆ ಲಯನ್ಸ್ ಕ್ಲಬ್ ಹುಣಸೂರು ಕಾವೇರಿ ಸಂಭ್ರಮ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾರಿ ಲಯನ್ಸ್ ಅಧ್ಯಕ್ಷ ಎನ್.ಬಿ. ನಾಗಪ್ಪ ಧ್ವಜಾರೋಹಣ ಮಾಡಿ ಸ್ವಾತಂತ್ರ್ಯೋತ್ಸವದ ಬಗ್ಗೆ ಮಾತನಾಡುತ್ತಾ; ಇಂದು ಭಾರತ ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಿದ್ದೇವೆ ಎಂದರು.
ಈ ಸಂದರ್ಭ ಲಯನ್ಸ್ ಕ್ಲಬ್ ಉಪಾಧ್ಯಕ್ಷ ಬಿ.ಸಿ. ಧರ್ಮಪ್ಪ, ಜಿ. ನಾರಾಯಣ ಸ್ವಾಮಿ, ಪದಾಧಿಕಾರಿಗಳಾದ ಶಂಕರ್, ಎಸ್.ಜಿ. ನರೇಶ್ಚಂದ್ರ, ಜೆ.ಬಿ. ಪರಮೇಶ್, ಕೇಶವಮೂರ್ತಿ, ಭಾರತೀ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜಗನ್ಪಾಲ್, ನಿರ್ದೇಶಕ ಬಿ.ಟಿ. ರಂಗಸ್ವಾಮಿ, ಪ್ರಾಂಶುಪಾಲ ಅಶೋಕ್, ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದು; ಶಿಕ್ಷಕ ನರಸಿಂಹಮೂರ್ತಿ ಸ್ವಾಗತಿಸಿ, ವಂದಿಸಿದರು. ಲಯನ್ಸ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಸಿಹಿ ಹಂಚಿದರು.
ಶನಿವಾರಸಂತೆ: ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಧ್ವಜಾರೋಹಣ ಮಾಡಿದರು. ಈ ಸಂದರ್ಭ ಸಹಾಯಕ ಠಾಣಾಧಿಕಾರಿ ಶಿವಲಿಂಗ, ಹೆಚ್.ಎಂ. ಗೋವಿಂದ್, ಕೃಷ್ಣೆಗೌಡ ಹಾಗೂ ಪೊಲೀಸ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಗೋಪಾಲಪುರ : ನಿಡ್ತ ಗ್ರಾ.ಪಂ. ವ್ಯಾಪ್ತಿಯ ಗೋಪಾಲಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರಸಂತೆ ಲಯನ್ಸ್ ಕ್ಲಬ್ ಹುಣಸೂರು ಕಾವೇರಿ ಸಂಭ್ರಮ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಯನ್ಸ್ ಖಜಾಂಚಿ ಬಿ.ಕೆ. ಚಿಣ್ಣಪ್ಪ ಧ್ವಜಾರೋಹಣ ಮಾಡಿ ಸ್ವಾತಂತ್ರ್ಯೋತ್ಸವ ಮಹತ್ವದ ಬಗ್ಗೆ ಮಾತನಾಡಿದರು.
ಈ ಸಂದರ್ಭ ಲಯನ್ಸ್ ಅಧ್ಯಕ್ಷ ಎನ್.ಬಿ. ನಾಗಪ್ಪ, ಪದಾಧಿಕಾರಿಗಳಾದ ಬಿ.ಸಿ. ಧರ್ಮಪ್ಪ, ನಾರಾಯಣಸ್ವಾಮಿ, ಎಸ್.ಜಿ. ನರೇಶ್ಚಂದ್ರ, ಕೇಶವಮೂರ್ತಿ, ಜಗನ್ಪಾಲ್, ಜೆ.ಬಿ. ಪರಮೇಶ್, ಶಂಕರ್, ಮುಖ್ಯ ಶಿಕ್ಷಕ ಅಪ್ಪಸ್ವಾಮಿ, ನಿವೃತ್ತ ಶಿಕ್ಷಕ ಸಿ.ಎಲ್. ಸುಬ್ಬಯ್ಯ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಲಯನ್ಸ್ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಹಂಚಿದರು. ಅಪ್ಪಸ್ವಾಮಿ ಸ್ವಾಗತಿಸಿ ವಂದಿಸಿದರು.ಕಿತ್ತೂರು ಚೆನ್ನಮ್ಮ ಮಹಿಳಾ ಸಮಾಜ ಮತ್ತು ಜನನಿ ಪ್ರತಿಷ್ಠಾಪನ, ಮಡಿಕೇರಿ ವತಿಯಿಂದ 73ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.