ನಾಪೋಕ್ಲು, ಆ. 25: ಪಟ್ಟಣ ವ್ಯಾಪ್ತಿಯಲ್ಲಿ ವಿವಿಧ ಬಗೆಯ ಸಮುದ್ರದ ಮೀನುಗಳನ್ನು ಅಗ್ಗದ ದರದಲ್ಲಿ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಮೀನನ್ನು ಕೊಳ್ಳಲು ಗ್ರಾಹಕರು ಮುಗಿಬಿದ್ದರು.

ಮುಂಗಾರು ಮಳೆಯ ಆರಂಭದ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ನಿರ್ಬಂಧ ಹೇರಲಾಗಿದ್ದ ಹಿನ್ನೆಲೆಯಲ್ಲಿ ಸಮುದ್ರ ಮೀನು ಮಾರುಕಟ್ಟೆಗೆ ಬಾರದ ಕಾರಣ ಮೀನುಗಳ ದರ ಕೆ.ಜಿ.ಯೊಂದಕ್ಕೆ 200ರಿಂದ 250 ಕ್ಕೆ ಗಗನಕ್ಕೇರಿದ್ದವು. ನಾಪೋಕ್ಲು ವ್ಯಾಪ್ತಿಯಲ್ಲಿ ಸಮುದ್ರದ ಮೀನುಗಳ ಮಾರಾಟ ವೇಳೆ ಗ್ರಾಹಕರು ಮುಗಿಬಿದ್ದರು. ಮೀನುಗಳ ಮಾರಾಟವು ಭರ್ಜರಿಯಾಗಿ ನಡೆಯಿತು. - ದುಗ್ಗಳ