ಸುಂಟಿಕೊಪ್ಪ, ಆ. 25: ಕೆದಕಲ್ ಗ್ರಾಮ ಪಂಚಾಯಿತಿಯ ಹೊರೂರು ಮಠ ಸಾರ್ವಜನಿಕ ಗಣÉೀಶೋತ್ಸವ ಸೇವಾ ಸಮಿತಿ ವತಿಯಿಂದ ರಾಸಾಯನಿಕ ಬಣ್ಣವನ್ನು ಬಳಸದೆ ಪರಿಸರ ಗಣಪನನ್ನು ಪ್ರತಿಷ್ಠಾಪಿಸಿ ವಿಸರ್ಜಿಸಲಾಗುವದು ಎಂದು ಸಮಿತಿ ಅಧ್ಯಕ್ಷರು ಪದಾÀಧಿಕಾರಿಗಳು ತಿಳಿಸಿದ್ದಾರೆ.

ಪರಿಸರಕ್ಕೆ ಮಾರಕವಾಗದ ರಾಸಾಯನಿಕ ಬಣ್ಣವನ್ನು ನೀರಿನೊಂದಿಗೆ ಬೆರೆತರೆ ಪರಿಸರ ಹಾಳಾಗುತ್ತದೆ. ನೆಲಜಲ ಸಂರಕ್ಷಣೆ, ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಪರಿಸರ ಗಣಪನನ್ನು ತಯಾರಿಸಲಾಗಿದೆ. ಸೆ. 2 ರಂದು ಬೆಳಿಗ್ಗೆ 4 ಗಂಟೆಗೆ ಗಣಹೋಮ. 5.30ಕ್ಕೆ ಗೌರಿ ಗಣೀಶ ಮೂರ್ತಿ ಪ್ರತಿಷ್ಠಾಪನೆ, ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ 2 ಗಂಟೆಗೆ ಅನ್ನದಾನ ಸಂಜೆ 6 ಗಂಟೆಗೆ ಗೌರಿ ಗಣೀಶ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ನಡೆಯಲಿದೆ. ಎಂದು ಸಂಘದ ಅಧ್ಯಕ್ಷ ದೇವಿಪ್ರಸಾದ್ ಕಾಯರ್‍ಮಾರ್ ಮತ್ತು ಸದಸ್ಯರು ತಿಳಿಸಿದ್ದಾರೆ.