ಗೋಣಿಕೊಪ್ಪ ವರದಿ, ಆ. 25: ಇಲ್ಲಿನ ಕಾವೇರಿ ಮಹಿಳಾ ಸಮಾಜದ ಮಹಾಸಭೆ ಸಮಾಜದ ಅಧ್ಯಕ್ಷೆ ಕಟ್ಟೇರ ಉತ್ತರೆ ಅಪ್ಪಚ್ಚು ಅಧ್ಯಕ್ಷತೆಯಲ್ಲಿ ನಡೆಯಿತು. ವಾರ್ಷಿಕ ಲೆಕ್ಕಪತ್ರ ಮಂಡನೆ, ವರದಿ ಅಂಗೀಕರಿಸಲಾಯಿತು. ಸಮಾಜದ ವತಿಯಿಂದ ನಡೆಯಬೇಕಾಗಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಉಪಾಧ್ಯಕ್ಷೆ ಚಂಬಂಡ ಮೀನಾ ಅಕ್ಕಮ್ಮ, ಕಾರ್ಯದರ್ಶಿ ಕೊಣಿಯಂಡ ಬೋಜಮ್ಮ ಉತ್ತಮ್ಮ, ಖಜಾಂಜಿ ರೀನಾ ರಾಜೀವ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.