ಪೊನ್ನಂಪೇಟೆ, ಆ. 25: ಅರುವತ್ತೊಕ್ಲುವಿನ ಸರ್ವದೈವತ ವಿದ್ಯಾಸಂಸ್ಥೆಯಲ್ಲಿ ಗೋಣಿಕೊಪ್ಪ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು. ಉದ್ಘಾಟನೆಯನ್ನು ಸ್ಪರ್ಧೆಗೆ ಆಗಮಿಸಿದ್ದ ವಿದ್ಯಾರ್ಥಿಗಳಿಂದಲೇ ಮಾಡಿಸಿದ್ದು ವಿಶೇಷವಾಗಿತ್ತು. ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ ಮೊಣ್ಣಪ್ಪ ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣ ಮಾಡುವ ಮೂಲಕ ಈ ವೇದಿಕೆಯ ಸದ್ಭಳಕೆಯನ್ನು ಮಾಡಿಕೊಳ್ಳಬೇಕು ಎಂದರು.

ವೀರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲಬ್ಯಾಳಗಿ ಕಾರ್ಯಕ್ರಮದ ಆಯೋಜನೆಯು ಬಹಳ ಶಿಸ್ತುಬದ್ಧವಾಗಿದೆಯೆಂದು ಮೆಚ್ಚುಗೆಯ ಮಾತನಾಡಿದರು.

ಈ ಸಂದರ್ಭ ವೀರಾಜಪೇಟೆ ತಾಲೂಕಿನ ದೈಹಿಕ ಪರೀವೀಕ್ಷಕ ಪಿ.ಡಿ.ರತಿ, ಸಮೂಹ ಸಂಪನ್ಮೂಲ ವ್ಯಕ್ತಿ ವನಜಾಕ್ಷಿ, ಪ್ರಾಂಶುಪಾಲೆ ಲಲಿತಾಮೊಣ್ಣಪ್ಪ, ಮುಖ್ಯ ಶಿಕ್ಷಕ ಪ್ರದೀಪ್ ಪಿ.ಆರ್., ಗೋಣಿಕೊಪ್ಪ ಕ್ಲಸ್ಟರ್‍ನ ಸಿಆರ್‍ಪಿ ಜ್ಯೋತಿಶ್ರೀ, ಪೊನ್ನಂಪೇಟೆ, ಮಾಯಾಮುಡಿ, ಕುಟ್ಟ, ತಿತಿಮತಿ ಹಾಗೂ ವಿವಿಧ ಕ್ಲಸ್ಟರ್‍ನ ಸಿಆರ್‍ಪಿಗಳು ಉಪಸ್ಥಿತರಿದ್ದರು. ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳು ಪ್ರತಿಭಾ ಪ್ರದರ್ಶನ ಮಾಡಿದರು. ಶಿಕ್ಷಕಿ ಶೀಲಾ ಬೋಪಣ್ಣ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.