ಗೋಣಿಕೊಪ್ಪ ವರದಿ, ಆ. 25: ಕಸ ನಿರ್ವಹಣೆ ವಿಚಾರದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಯೊಂದಿಗೆ ಚರ್ಚಿಸಿ ಯೋಜನೆ ರೂಪಿಸಿಕೊಳ್ಳಲು ತಾ. 29 ರಂದು ವಿಶೇಷ ಸಭೆ ನಡೆಸಲು ಗೋಣಿಕೊಪ್ಪ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಗೋಣಿಕೊಪ್ಪ ಅಭಿವೃದ್ಧಿ ಸಮಿತಿಯ ಪ್ರಥಮ ಸಭೆಯಲ್ಲಿ ನಿರ್ಧರಿಸಲಾಯಿತು.
ಗೋಣಿಕೊಪ್ಪ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪೊನ್ನಿಮಾಡ ಸುರೇಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಕಾರ್ಯದರ್ಶಿ ಎಚ್. ಕೆ. ಜಗದೀಶ್, ಪದಾಧಿಕಾರಿಗಳಾದ ಸುನಿಲ್ ಮಾದಪ್ಪ, ಕೊಣಿಯಂಡ ಬೋಜಮ್ಮ ಉತ್ತಪ್ಪ, ತನ್ವಿರ್ ಅಹಮ್ಮದ್, ಪ್ರಮೋದ್ ಕಾಮತ್, ಸುಜಯ್ ಬೋಪಯ್ಯ, ಸಣ್ಣುವಂಡ ಕಿಶೋರ್ ನಾಚಪ್ಪ, ಸ್ಥಳೀಯ ಗ್ರಾ.ಪಂ. ಲೆಕ್ಕ ಅಧಿಕಾರಿ ಪ್ರಕಾಶ್ ಸಭೆಯಲ್ಲಿ ಪಾಲ್ಗೊಂಡಿದ್ದರು.