ವೀರಾಜಪೇಟೆ, ಆ. 25: ವಿಶ್ವ ಹಿಂದೂ ಪರಿಷತ್ ಸಂಸ್ಥಾಪನಾ ದಿನವನ್ನು ಸರಳ ರೀತಿಯಲ್ಲಿ ವೀರಾಜ ಪೇಟೆ ತಾಲೂಕು ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ವೀರಾಜಪೇಟೆ ವತಿಯಿಂದ ನಗರದ ಬಾಲಾಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
1964 ರ ಶ್ರೀ ಕೃಷ್ಣ ಜನ್ಮಾಷ್ಠಮಿಯ ದಿನ ವಾದ ಅಂದು ವಿಶ್ವ ಹಿಂದೂ ಪರಿಷತ್ ಉದಯಗೊಂಡಿತು. ಸಂಘಟನೆಯ ಮೈಸೂರು ಸಂಸ್ಥಾನದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಅಧ್ಯಕ್ಷರಾಗಿ ನೇಮಕ ಗೊಂಡರು. ಭಗವಾನ್ ಶ್ರೀ ಕೃಷ್ಣನು ಹಿಂದೂ ಧರ್ಮದ ಸಾರವನ್ನು ಭಗವತ್‍ಗೀತೆಯಲ್ಲಿ ಉಲ್ಲೇಖಿಸಿದಂತೆ ಶ್ರೀ ಕೃಷ್ಣ ಜನ್ಮಾಷ್ಠಮಿಯ ದಿನದಂದು ಉದಯವಾದ ವಿಶ್ವ ಹಿಂದೂ ಪರಿಷತ್ ಹಲವು ಕ್ಷೇತ್ರದಲ್ಲಿ ತನ್ನದೆ ಆದ ಹಲವು ಆಯಾಮಗಳನ್ನು ಒಳಗೊಂಡು ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿದೆ. ಇಂದು ಪ್ರಪಂಚದ ನಾನಾ ಮೂಲೆಗಳಲ್ಲಿ ತನ್ನ ಛಾಪುನ್ನು ಮೂಡಿಸಿದೆ. ಹಿಂದೂ ಸಮಾಜ ಧ್ಯೇಯ ಮತ್ತು ಸೇವೆಗೆ ಮುಡುಪಾಗಿ ಸೇವೆ ಸಲ್ಲಿಸುತ್ತಿದೆ . ದೇವಾಲಯದಲ್ಲಿ ಪೊಜೆಯನ್ನು ಸಲ್ಲಿಸಿದ ಬಳಿಕ ಆಲಯದ ವತಿಯಿಂದ ಪ್ರಸಾದ ವಿನಿಯೊಗ ನಡೆಯಿತು.
ಈ ವೇಳೆಯಲ್ಲಿ ಭಜರಂಗದಳ ತಾಲ್ಲೂಕು ಸಂಚಾಲಕ ವಿವೇಕ್ ರೈ, ನಾಗೇಶ್ ನಗರ ಅಧ್ಯಕ್ಷರದ ಪೊನ್ನಪ್ಪ ರೈ, ದುರ್ಗವಾಹಿನಿ ತಾಲ್ಲೂಕು ವಿದ್ಯಾರ್ಥಿನಿ ಪ್ರಮುಖ ರಮ್ಯ, ಪ್ರಮುಖರಾದ ಸೀತಾರಾಂ ಭಟ್ ಕೇದಿಲಾಯ ಅರುಣ್ ಕುಮಾರ್ ಮತ್ತು ಚೇತನ್ ಹಾಜರಿದ್ದರು.