ನಾಪೆÇೀಕ್ಲು, ಆ. 25: ಇತ್ತೀಚೆಗೆ ಸುರಿದ ಭಾರೀ ಮಳೆಯ ಪರಿಣಾಮ ನೆಲಜಿ ಗ್ರಾಮದ ಅಪ್ಪುಮಣಿಯಂಡ ರಘು ಸುಬ್ಬಯ್ಯ ಅವರ ಭತ್ತದ ಗದ್ದೆಯ ಬದಿ ಬರೆ ಕುಸಿತಗೊಂಡು ಅಪಾರ ನಷ್ಟ ಸಂಭವಿಸಿದೆ.
ಬರೆ ಕುಸಿತದ ಮಣ್ಣು ತೋಡಿನಲ್ಲಿ ತುಂಬಿರುವ ಕಾರಣ ಗದ್ದೆಯಲ್ಲಿ ನೀರು ಹರಿದಿದ್ದು, ಮಣ್ಣು ಮತ್ತು ಮರಳು ನಾಟಿ ಮಾಡಿದ ಗದ್ದೆಯನ್ನು ಮುಚ್ಚಿಹಾಕಿದೆ. ಸರಕಾರ ಕೂಡಲೇ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.