ಮಡಿಕೇರಿ, ಆ. 25: ನಗರದ ಶ್ರೀ ಓಂಕಾರೇಶ್ವರ ದೇವಾಲಯ ಬಳಿಯ ಗೌರಿಕೆರೆಗೆ ಇಂದು ನಗರಸಭಾ ಸಿಬ್ಬಂದಿ ಕಾಯಕಲ್ಪ ನೀಡಿದರು. ಶ್ರೀ ಗೌರಿ ಗಣೇಶೋತ್ಸವ ಹಿನ್ನೆಲೆಯಲ್ಲಿ ಉತ್ಸವ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ; ಕೆರೆಯನ್ನು ಸಂಪೂರ್ಣ ಸ್ವಚ್ಛಗೊಳಿಸ ಲಾಯಿತು. ಪ್ರತಿವರ್ಷದಂತೆ ಈ ಬಾರಿ ಗೌರಿ ಗಣೇಶೋತ್ಸವಕ್ಕೆ ಪೂರಕವಾಗಿ ನಗರಸಭೆ ಸಿಬ್ಬಂದಿಗಳು ಓಬಳಿ ಹಾಗೂ ಈರಪ್ಪ ನೇತೃತ್ವದಲ್ಲಿ ಶ್ರಮದಾನ ನಡೆಸಿದರು. ಈ ಬಗ್ಗೆ ದೇಶಪ್ರೇಮಿ ಯುವಕ ಸಂಘದ ಅಧ್ಯಕ್ಷ ಅರುಣ್ ಶೆಟ್ಟಿ ಸಾರ್ವಜನಿಕರ ಪರವಾಗಿ ನಗರಸಭಾ ಆಯುಕ್ತ ಎಂ.ಎಲ್. ರಮೇಶ್ ಅವರಿಗೆ ಮನವಿ ಸಲ್ಲಿಸಿದರು.