ಕುಶಾಲನಗರ, ಆ. 25: ಕುಶಾಲನಗರದ ಕಾರು ಮಾಲೀಕರು ಮತ್ತು ಚಾಲಕರ ಸಂಘದ 2018-19ನೇ ಸಾಲಿನ ಅಧ್ಯಕ್ಷರಾಗಿ ಎನ್.ಕೆ. ತಮ್ಮಯ್ಯ ಆಯ್ಕೆಯಾಗಿದ್ದಾರೆ.

ಪಟ್ಟಣದಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದು ಉಪಾಧ್ಯಕ್ಷರಾಗಿ ಎಚ್.ಎಂ.ಚಂದ್ರು, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಸ್. ರಾಘವೇಂದ್ರ, ಸಹ ಕಾರ್ಯದರ್ಶಿಯಾಗಿ ಎಂ.ಎಫ್. ನಿಸಾರ್ ಅಹಮ್ಮದ್, ಖಜಾಂಚಿಯಾಗಿ ಪದ್ಮಪ್ಪ ಪೂಜಾರಿ, ಗೌರವಾಧ್ಯಕ್ಷರಾಗಿ ಎಸ್.ಎನ್. ವಿಜು, ಸಲಹೆಗಾರರಾಗಿ ಡಿ.ಕೆ. ತಿಮ್ಮಪ್ಪ, ಡಿ.ವಿಶ್ವನಾಥ್, ನಿರ್ದೇಶಕರುಗಳಾಗಿ ಎ.ಡಿ.ಪುನಿತ್, ಡಿ.ಸಂತೋಷ್, ಎಂ.ಎನ್.ಶ್ರೀನಿವಾಸ್, ಕೆ.ಎನ್.ರವಿಕುಮಾರ್, ಎಸ್.ಇಸ್ಮಾಯಿಲ್, ಜಿ.ಬಿ.ವಸಂತ್, ಎ.ಎಂ.ಬಸವರಾಜು ಅವರುಗಳನ್ನು ಆಯ್ಕೆ ಮಾಡಲಾಯಿತು.