ಕುಶಾಲನಗರ, ಆ. 25: ಕುಶಾಲನಗರ ಟೀಮ್ ಆಟಿಟ್ಯೂಡ್ ನೇತೃತ್ವದ ಕಲಾ ಭೂಮಿ ಅಕಾಡೆಮಿಗೆ ಚಾಲನೆ ನೀಡಲಾಯಿತು. ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯದ ಸಿದ್ದಗಂಗಾ ಕಾಂಪ್ಲೆಕ್ಸ್‍ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಡಿಕೇರಿ ತಾಪಂ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ ಕಲಾಭೂಮಿ ಕಚೇರಿ ಉದ್ಘಾಟಿಸಿದರು.
ಈ ಸಂದರ್ಭ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ, ರೋಟರಿ ಅಧ್ಯಕ್ಷ ಅಶೋಕ್, ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಂಚಾಲಕ ಎಂ.ಎನ್. ಚಂದ್ರಮೋಹನ್, ಉದ್ಯಮಿ ಉಮಾಶಂಕರ್, ಮಹೇಶ್, ಪ.ಪಂ. ಸದಸ್ಯೆ ರೂಪಾ ಉಮಾಶಂಕರ್, ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನಂದೀಶ್, ಟೀಂ ಆಟಿಟ್ಯೂಡ್‍ನ ಕಿರಣ್ ಮತ್ತಿತರರು ಇದ್ದರು.