ಮಡಿಕೇರಿ, ಆ. 24: ಮನುಷ್ಯನ ಅಂತರಾತ್ಮದ ಶುದ್ಧಿಯಾದಾಗ ಮಾತ್ರ ನಮ್ಮಲ್ಲಿ ಒಳ್ಳೆಯ ಭಾವನೆಗಳು ಉದ್ಭವವಾಗುತ್ತದೆ. ಮತ ಸಹಿಶ್ಣುತೆಯು ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಬೇಕಾದ ಮುಖ್ಯವಾದ ಅಸ್ತ್ರವಾಗಿದೆ ಎಂದು ಅರುವತ್ತೊಕ್ಲು ಸರ್ವದೈವತಾ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕಾಡ್ಯಮಾಡ ಪ್ರಕಾಶ್ ಮೊಣ್ಣಪ್ಪ ಹೇಳಿದರು.
ಪ್ರಾರ್ಥನೆ, ಯೋಗ, ಧ್ಯಾನ, ಉತ್ತಮ ಆಲೋಚನೆಗಳನ್ನು ಎಲ್ಲಾ ಮಕ್ಕಳು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಅವರು ರಾಷ್ಟ್ರೀಯ ಸದ್ಭಾವನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಭಿಪ್ರಾಯಿಸಿದರು.
ಸರ್ವದೈವತಾ ವಿದ್ಯಾಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು ಮಾತನಾಡಿ ದರು. ವಿವಿಧ ಸಾಂಸ್ಕøತಿಕ ಕಾರ್ಯ ಕ್ರಮಗಳೊಂದಿಗೆ ಮಕ್ಕಳಿಗೆ ಸದ್ಭಾವನದ ಮಹತ್ವವನ್ನು ತಿಳಿಯಪಡಿಸಿದರು. ವೇದಿಕೆಯಲ್ಲಿ ಶಾಲಾ ಪ್ರಾಂಶುಪಾಲೆ ಕಾಡ್ಯಮಾಡ ಲಲಿತ ಮೊಣ್ಣಪ್ಪ, ಮುಖ್ಯ ಶಿಕ್ಷಕ ಪ್ರದೀಪ್ ಪಿ.ಆರ್. ಉಪಸ್ಥಿತರಿದ್ದರು.
ಶಿಕ್ಷಕಿಯರಾದ ರಮ್ಯಶ್ರೀ ಸ್ವಾಗತಿಸಿ, ಧರಣಿ ವಂದಿಸಿ, ಮೋನಿಕಾ ನಿರೂಪಿಸಿದರು.