ಮಡಿಕೇರಿ, ಆ. 24: ಕೊಡಗು ಜಿಲ್ಲೆಯ ಉದ್ದಗಲಕ್ಕೂ ಶಾಲಾ-ಕಾಲೇಜುಗಳು, ಸ್ಥಳೀಯ ಸಂಸ್ಥೆಗಳು, ಇತರ ಸಂಘ-ಸಂಸ್ಥೆಗಳಿಂದ ಭಾರತದ 73ನೇ ಸ್ವಾತಂತ್ರ್ಯ ದಿನಾಚರಣೆಯೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕರಿಕೆ: 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಈ ಬಾರಿ ಕರಿಕೆ ಚೆತ್ತುಕಾಯ ಕಾಲೋನಿ ಶಾಲೆಯಲ್ಲಿ ವಿಶೇಷವಾಗಿ ಆಚರಿಸಲಾಯಿತು. ಇದೇ ಶಾಲೆಯ ಹಳೆ ವಿದ್ಯಾರ್ಥಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಹೊದ್ದೆಟ್ಟಿ ಉದಯ ಕುಮಾರ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ನಂತರ ಮಕ್ಕಳು ಪ್ರಮುಖ ರಸ್ತೆಯ ಮೂಲಕ ಸಾತಂತ್ರ್ಯ ಹೋರಾಟಗಾರರ ಹೆಸರನ್ನು ಘೋಷಣೆ ಕೂಗುತ್ತಾ ಮೆರವಣಿಗೆ ಸಾಗಿದರು. ಸಭಾ ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಉದಯಕುಮಾರ್ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಿತ್ರಕುಮಾರ್, ಉಪಾಧ್ಯಕ್ಷೆ ನಳಿನಾಕ್ಷಿ, ಮುಖ್ಯೋಪಾಧ್ಯಾಯ ಕುಮಾರ್ ಹಾಗೂ ಶಾಲಾಬಿವೃದ್ಧಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು ಹಾಜರಿದ್ದರು. ಬರಮಪ್ಪ ಪಾಷಗಾರ ಸ್ವಾಗತಿಸಿ, ಗಣೇಶಚಾರಿ ವಂದಿಸಿದರು.
ಆಶ್ರಮ ಶಾಲೆ: ಇಲ್ಲಿನ ಚೆತ್ತುಕ್ಕಾಯ ಆಶ್ರಮ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಧ್ವಜಾರೋಹಣವನ್ನು ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್ ನೆರವೇರಿಸಿದರು. ಈ ಸಂದರ್ಭ ಶಿಕ್ಷಕರು, ಪೋಷಕರು, ಮಕ್ಕಳು ಉಪಸ್ಥಿತರಿದ್ದರು.ಗೋಣಿಕೊಪ್ಪ: ಇಲ್ಲಿಗೆ ಸಮೀಪದ ಅತ್ತೂರುವಿನ ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಶಿಸ್ತಿನಿಂದ ಪಥಸಂಚಲನ ನಡೆಸಿ ಗಮನ ಸೆಳೆದರು. ಶಾಲಾ ಸಂಸ್ಥಾಪಕಿ ಶಾಂತಿ ಅಚ್ಚಪ್ಪ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ದಿನದ ಆರಂಭಿಕ ದಿನಗಳನ್ನು ವಿವರಿಸಿದರು. ಟ್ರಷ್ಟಿ ರಕ್ಷಿತ್ ಅಯ್ಯಪ್ಪ ಮಾತನಾಡಿ, ಹಿರಿಯರು ಗಳಿಸಿದ ಸ್ವಾತಂತ್ರ್ಯವನ್ನು ಉಳಿಸಲು ಕರೆ ನೀಡಿದರು. ಸ್ವಾತಂತ್ರ್ಯ ದಿನದ ಮಹತ್ವವಾಗಿ ವಿದ್ಯಾರ್ಥಿಗಳಿಗೆ ಛದ್ಮವೇಷ, ಭಾಷಣ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲ ಅರುಣ್ಕುಮಾರ್ ಸೇರಿದಂತೆ ಎಲ್ಲಾ ಶಿಕ್ಷಕ ವರ್ಗದವರು, ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮದ ಕೊನೆಗೆ ಸಿಹಿ ಹಂಚಲಾಯಿತು.
ಚೆಟ್ಟಳ್ಳಿ: ನೂರುಲ್ ಹುದಾ ಸೆಕೆಂಡರಿ ಮದ್ರಸ ಆಜಾದ್ದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷ ಟಿ.ಎಂ. ಉಸ್ಮಾನ್ ಹಾಜಿ, ಮದ್ರಸ ಸದರ್ ಹಸ್ಸನ್ ಸ-ಅದಿ, ಎಸ್ಎಸ್ಎಫ್ ಶಾಖಾ ಅಧ್ಯಕ್ಷ ಮುರ್ಷಿದ್ ಅದಾನಿ ಹಾಗೂ ಗಫೂರ್ ಸಖಾಫಿ, ಅಶ್ರಫ್ ಝಯಿನಿ, ಮುಹಮ್ಮದ್ ಸಖಾಫಿ ಹಾಗೂ ಮದ್ರಸಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬೆಟ್ಟಗೇರಿ: ಬೆಟ್ಟಗೇರಿ ಅಯಾತುಲ್ ಇಸ್ಲಾಂ ಅರಬಿ ಮದರಸದಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಜಮಾಅತ್ ಅಧ್ಯಕ್ಷ ಎಂ.ಎ. ಮೊಯಿದು ಧ್ವಜಾರೋಹಣ ನೆರವೇರಿಸಿದರು. ಸದರ್ ಮೂಹಲ್ಲಿಮ್ ಜಲೀಲ್ ಉಸ್ತಾದ್ ಹಿತವಚನ ನೀಡಿದರು. ಮಕ್ಕಳಿಗೆ ಸಿಹಿ ಹಂಚಲಾಯಿತು.ಗೋಣಿಕೊಪ್ಪ: 73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಚೇಂಬರ್ ಆಫ್ ಕಾಮರ್ಸ್ನ ಸ್ಥಾನೀಯ ಸಮಿತಿ ಅಧ್ಯಕ್ಷ ಕಡೇಮಾಡ ಸುನಿಲ್ ಮಾದಪ್ಪ ಧ್ವಜಾರೋಹಣ ನೆರವೇರಿಸಿದರು.
ವಿಶೇಷ ಅತಿಥಿಗಳಾಗಿ ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಇಟ್ಟಿರ ಕೆ. ಬಿದ್ದಪ್ಪ ಆಗಮಿಸಿದ್ದರು. ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಒಳರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು. ಚೇಂಬರ್ನ ನಿರ್ದೇಶಕಿ ಚೇಂದಂಡ ಸುಮಿ ಸುಬ್ಬಯ್ಯ ರೋಗಿಗಳಿಗೆ ಬಟ್ಟೆ ವಿತರಿಸಿದರು.
ವಿವೇಕಾನಂದ ಯೂತ್ ಮೂಮೆಂಟ್ನ ಅಧ್ಯಕ್ಷ ಡಾ. ಚಂದ್ರಶೇಖರ್, ಡಾ. ಶಿವಪ್ಪ, ಕಡೇಮಾಡ ನೆವಿನ್ ಮುಂತಾದವರು ಅಭಿಪ್ರಾಯ ಮಂಡಿಸಿದರು. ವೇದಿಕೆಯಲ್ಲಿ ಆರೋಗ್ಯ ಕೇಂದ್ರದ ವೈದ್ಯರುಗಳಾದ ಡಾ. ಗ್ರೀಷ್ಮಾ, ಡಾ. ಸುರೇಶ್, ಚೇಂಬರ್ನ ಹಿರಿಯ ಉಪಾಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು. ಈ ಭಾರಿಯ ಮಳೆಯಿಂದ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ಒಂದು ನಿಮಿಷದ ಮೌನ ಆಚರಣೆ ಮಾಡಲಾಯಿತು.
ಚೆಟ್ಟಳ್ಳಿ: ಇಲ್ಲಿನ ಪ್ರೌಢಶಾಲೆಯಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ದಿಲೀಪ್ ಅಪ್ಪಚ್ಚು ನೆರವೇರಿಸಿದರು.
ಈ ಸಂದರ್ಭ ಶಾಲಾ ಆಡಳಿತ ಮಂಡಳಿ ಸಂಚಾಲಕ ಮುಳ್ಳಂಡ ರತ್ತು ಚಂಗಪ್ಪ, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಜಿ.ಸಿ. ಸತ್ಯನಾರಾಯಣ, ಶಿಕ್ಷಕರಾದ ತಿಲಕ, ಸುನಂದಾ, ನೂತನ, ಫಸೀಲ, ಮನೋಜ್ ಇದ್ದರು.
ಸುಂಟಿಕೊಪ್ಪ: ಇಲ್ಲಿನ ಮಾರುಕಟ್ಟೆಯ ಬಳಿ ಇರುವ ತಲೆಹೊರೆ ಕಾರ್ಮಿಕರ ಸಂಘದ ವತಿಯಿಂದ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್ ನೆರವೇರಿಸಿದರು.
ಹಿರಿಯ ಮುಖಂಡ ಎಂ.ಎ. ವಸಂತ ಮಾತನಾಡಿದರು. ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ಕೋರಿದರು. ಪೌರಕಾರ್ಮಿಕರಾಗಿ ನಿವೃತ್ತರಾದ ರಾಜು ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಮುತ್ತಯ್ಯ, ಪತ್ರಕರ್ತರಾದ ರಾಜುರೈ, ವಹೀದ್ಜಾನ್ ಜಿಲ್ಲಾ ವಾಹನ ಚಾಲಕರ ಸಂಘದ ಅಧ್ಯಕ್ಷ ಎಂ.ಎ. ಉಸ್ಮಾನ್, ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ, ವಿದ್ಯಾರ್ಥಿಗಳು, ಪದಾಧಿಕಾರಿಗಳು ಇದ್ದರು.
ಪೊಲೀಸ್ ಠಾಣೆ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಎಸ್ಐ ಜಯರಾಂ ಧ್ವಜಾರೋಹಣವನ್ನು ನೆರವೇರಿಸಿದರು. ಈ ಸಂದರ್ಭ ಪೊಲೀಸ್ ಸಿಬ್ಬಂದಿಯಿಂದ ಧ್ವಜವಂದನೆ ನಡೆಯಿತು.
ಕಾಲೇಜು: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವೈ.ಯಂ. ಕರುಂಬಯ್ಯ ಧ್ವಜಾರೋಹಣವನ್ನು ನೆರವೇರಿಸಿದರು. ಪ್ರಾಂಶುಪಾಲ ಪಿ.ಎಸ್. ಜಾನ್ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.ವೀರಾಜಪೇಟೆ: ಕಾವಾಡಿ-ಕಾರ್ಮಾಡು ಭಗವತಿ ಮಹಿಳಾ ಮಂಡಳಿ ಹಾಗೂ ಯುವತಿ ಮಂಡಳಿಯ ವತಿಯಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ದಿನದ ಅಂಗವಾಗಿ ನಡೆದ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಭಗವತಿ ಮಹಿಳಾ ಮಂಡಳಿ ಅಧ್ಯಕ್ಷರಾದ ಸರೋಜಿನಿ ಮುತ್ತಪ್ಪ ಮಾತನಾಡಿ, ಸ್ವಾತಂತ್ರ್ಯ ಲಭಿಸಲು ಕಾರಣರಾದ ಮಹಾತ್ಮರನ್ನು ಈ ಸಂದರ್ಭದಲ್ಲಿ ಸ್ಮರಿಸುವದು ನಮ್ಮೆಲ್ಲರ ಕರ್ತವ್ಯ ಎಂದರು.
ಮುತ್ತಮ್ಮ ಕಾರ್ಯಪ್ಪ, ಪ್ರೇಮ ಸುಬ್ಬಯ್ಯ, ರೀಟಾ ಚಿಣ್ಣಪ್ಪ, ಸುನೀತಾ ನಂದ ಕುಮಾರ್ ದೇಶ ಭಕ್ತಿಗೀತೆಗಳನ್ನು ಹಾಡಿದರು. ಸ್ವಾತಂತ್ರ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಆಟೋಟಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಹಿಳಾ ಸಮಾಜದ ಆವರಣವನ್ನು ಸ್ವಚ್ಛ ಮಾಡಿ ಶ್ರಮದಾನ ಮಾಡಲಾಯಿತು. ಸಭೆಯಲ್ಲಿ ಸಮಿತಿ ಸದಸ್ಯರಾದ ಜಮುನಾ ಜೀವನ್, ಪುಷ್ಪ ಪೂವಮ್ಮ, ಕಾವೇರಮ್ಮ ಹಾಜರಿದ್ದರು.
ಸುಂಟಿಕೊಪ್ಪ: ಕೆದಕಲ್ ಯೂತ್ ಫೆಡÀರೇಷನ್ ಕ್ಲಬ್ ವತಿಯಿಂದ 73ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಕೆದಕಲ್ ಪ್ರಾಥಮಿಕ ಶಾಲಾ ಆವರಣದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತರಾದ ಪುಲ್ಲೆರ ಬಿ. ವಸಂತ ಮತ್ತು ಮೇಲ್ಚೆಂಬು. ಎಸ್. ಶಿವಪ್ರಕಾಶ್ ಅವರನ್ನು ಯೂತ್ ಫೆÀಡರೇಷನ್ ಸಂಘದ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯ ವೆಂಕಪ್ಪ ಕೋಟ್ಯಾನ್, ಗ್ರಾ.ಪಂ. ಮಾಜಿ ಅಧ್ಯಕ್ಷ ಸೋಮಯ್ಯ ಯೂತ್ ಫೆಡರೇಷನ್ ಪದಾಧಿಕಾರಿಗಳು ಇದ್ದರು.
ಅಪ್ಪಂಗಳ: ಅಪ್ಪಂಗಳದ ಶ್ರೀ ವಿಜಯ ವಿನಾಯಕ ಸೇವಾ ಸಮಿತಿ ವತಿಯಿಂದ 73ನೇ ಸ್ವಾತಂತ್ರ್ಯೋತ್ಸವ ಜರುಗಿತು. ಎ.ಆರ್. ಪ್ರಜಿತ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಎಂ.ಆರ್. ರಾಘವೇಂದ್ರ ಸ್ವಾಗತಿಸಿ, ಸಂಘದ ಸಹ ಕಾರ್ಯದರ್ಶಿ ಪಿ.ಕೆ. ಸೋಮಯ್ಯ ವಂದಿಸಿದರು.
ಮರಗೋಡು: ಮರಗೋಡಿನ ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಭಾರತಿ ಹೈಸ್ಕೂಲ್ ಸೊಸೈಟಿಯ ಅಧ್ಯಕ್ಷ ಕಟ್ಟೆಮನೆ ಸೋನಾಜಿತ್ ಧ್ವಜಾರೋಹಣ ನೆರವೇರಿಸಿದರು.
ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾಗಿರುವ ಸಂತ್ರಸ್ತರೂ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡರು. ಪರಿಹಾರ ಕೇಂದ್ರದ ನೋಡಲ್ ಅಧಿಕಾರಿ ಗಿರೀಶ್, ಭಾರತಿ ಹೈಸ್ಕೂಲ್ ಸೊಸೈಟಿಯ ಕಾರ್ಯದರ್ಶಿ ದುಶ್ಯಂತ್, ನಿರ್ದೇಶಕ ಪಿ. ಶರತ್, ಮರಗೊಡು ಪಂಚಾಯಿತಿ ಅಧ್ಯಕ್ಷ ಬಿ. ಮೋಹನ್, ಹೊಸ್ಕೆರಿ ಪಂಚಾಯಿತಿ ಅಧ್ಯಕ್ಷೆ ಮಮತ, ಉಪಾಧ್ಯಕ್ಷ ಮಹಮ್ಮದ್ ಅಲಿ, ಪ್ರಾಂಶುಪಾಲ ಪಿ.ಟಿ. ಶಾಜಿ, ಮುಖ್ಯ ಶಿಕ್ಷಕ ಪಿ.ಎಸ್. ರವಿಕೃಷ್ಣ, ಮರಗೋಡು ಪಿ.ಡಿ.ಓ. ಆಶಾಕುಮಾರಿ, ಪಂಚಾಯಿತಿ ಸದಸ್ಯರು, ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಂಘ-ಸಂಸ್ಥೆಗಳ ಮುಖಂಡರು ಹಾಜರಿದ್ದರು.ಮಡಿಕೇರಿ: ಮಡಿಕೇರಿ ಗೂಡ್ಸ್ ಟೆಂಪೆÇೀ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ 73ನೇ ವರ್ಷದ ಸ್ವಾತಂತ್ರೋತ್ಸವವನ್ನು ಟೆಂಪೆÇೀ ನಿಲ್ದಾಣದಲ್ಲಿ ಅಧ್ಯಕ್ಷ ಎಂ.ಆರ್. ಮಣಿಕಂಠ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಾಜಿ ಸೈನಿಕ ಜಿ.ಎ. ಉಮೇಶ್, ನಗರಸಭಾ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ಉದ್ಯಮಿಗಳಾದ ಅರವಿಂದ್ ಕೆಂಚೆಟ್ಟಿ, ಎಂ.ಶ್ರೀಧರ್ ಪೂಜಾರಿ ಮತ್ತಿತರ ಪ್ರಮುಖರು ಹಾಜರಿದ್ದರು.
ಸಂಘದ ಸಲಹೆಗಾರ ಎಂ.ಕೆ. ದಾಮೋದರ್ ಸ್ವಾಗತಿಸಿ, ಕಾರ್ಯದರ್ಶಿ ಬಿ.ಎಸ್. ಜಯ ವಂದಿಸಿ, ಸದಸ್ಯ ಶ್ರೀನಿವಾಸ್ ನಿರೂಪಿಸಿದರು.
ಕರಿಕೆ: ಗ್ರಾಮದ ವಿವಿಧ ಕಡೆಗಳಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಚೆತ್ತುಕಾಯ ನ್ಯೂ ಫ್ರೆಂಡ್ಸ್ ಕ್ಲಬ್ ವತಿಯಿಂದ ಧ್ವಜಾರೋಹಣವನ್ನು ಹಿರಿಯರಾದ ಕೆ.ಡಿ. ಬಾಲಕೃಷ್ಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕ್ಲಬ್ನ ಅಧ್ಯಕ್ಷ ಶಿವಪ್ಪ, ಮಾಜಿ ಸೈನಿಕರುಗಳಾದ ಹೊದ್ದೆಟ್ಟಿ ಉದಯಕುಮಾರ್, ತಿಮ್ಮಯ್ಯ ಕೆ.ಕೆ. ಸೇರಿದಂತೆ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.ಕರಿಕೆ ಗ್ರಾಮ ಪಂಚಾಯಿತಿ: ಕರಿಕೆ ಗ್ರಾಮ ಪಂಚಾಯಿತಿಯಲ್ಲಿ ಧ್ವಜಾರೋಹಣ ಹಾಗೂ ವಾಹನ ಜಾಥಾ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯಿತಿ ಕಾರ್ಯಾಲಯ ಆವರಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ಬಾಲಚಂದ್ರ ನಾಯರ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಉಪಾಧ್ಯಕ್ಷೆ ಸೋಲಿ ಜಾರ್ಜ್, ಅಭಿವೃದ್ಧಿ ಅಧಿಕಾರಿ ಬಿಪಿನ್ ಕುದುಪಜೆ, ಸದಸ್ಯರುಗಳಾದ ಹರಿಪ್ರಸಾದ್, ಬಾಲಕೃಷ್ಣ ಪ್ರಮುಖರಾದ ಬೇಕಲ್ ದೇವರಾಜ್, ಹೊಸಮನೆ ಹರೀಶ್, ಬಲರಾಮ, ಕಟ್ಟಕೋಡಿ ಮಣಿ, ರೆಲ್ಸನ್ ಸೇರಿದಂತೆ ಪ್ರಮುಖರು, ಗ್ರಾಮಸ್ಥರು, ಸಿಬ್ಬಂದಿ ಹಾಜರಿದ್ದರು. ನಂತರ ಚೆತ್ತುಕಾಯ ಬರೂಕ ಜಲವಿದ್ಯುತ್ ಘಟಕದ ಮೈದಾನದಿಂದ ಜಿಲ್ಲೆಯ ಗಡಿ ಚೆಂಬೇರಿ ತನಕ ಸುಮಾರು ಎಂಟು ಕಿ.ಮಿ. ವಾಹನ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಕರಿಕೆ ಕೃಷಿ ಪತ್ತಿನ ಸಹಕಾರ ಸಂಘ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಬೇಕಲ್ ಶರಣ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಕಾರ್ಯದರ್ಶಿ ಗಂಗಾಧರ್ ಸಿಬ್ಬಂದಿ ವರ್ಗ ಹಾಜರಿದ್ದರು.ಕೂಡಿಗೆ: ಕೂಡಿಗೆಯ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಬಿ. ಮೊಣ್ಣಪ್ಪ ವಹಿಸಿದ್ದರು.
ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್, ಸದಸ್ಯರು, ಶಾಲೆಯ ಆಡಳಿತ ಮಂಡಳಿ ಸದಸ್ಯರಾದ ಬಿ.ಪಿ. ಅಪ್ಪಣ್ಣ, ಬಿ.ವಿ. ಅರುಣ್ಕುಮಾರ್, ಪೋಷಕ ಪರಿಷತ್ತಿನ ಉಪಾಧ್ಯಕ್ಷರು, ಪ್ರಭಾರ ಮುಖ್ಯೋಪಾಧ್ಯಾಯ ದುರ್ಗೇಶ್, ಶಾಲೆಯ ಶಿಕ್ಷಕ ವೃಂದದವರು ಇದ್ದರು.
ಸುಂಟಿಕೊಪ್ಪ: ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿರುವ ವಿಕಾಸ್ ಜನಸೇವಾ ಟ್ರಸ್ಟ್ ಆಶ್ರಮದಲ್ಲಿ 73ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭ ಮಡಿಕೇರಿ ನಗರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸುಂಟಿಕೊಪ್ಪದ ಹಿರಿಯ ನಾಗರಿಕರು ಹಾಗೂ ಆಶ್ರಮದ ಅಧ್ಯಕ್ಷ ರಮೇಶ್ ಹಾಜರಿದ್ದರು.
*ಸಿದ್ದಾಪುರ: ಅಭ್ಯತ್ಮಂಗಲ ಕೋಟೆದ ಬಬ್ಬು ವೈದ್ಯನಾಥೇಶ್ವರ ದೇವಸ್ಥಾನದಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.
ಹಿರಿಯರಾದ ಡಿ.ಎಲ್. ವಿಶ್ವನಾಥ್ ನೇತೃತ್ವದಲ್ಲಿ ಮಹಿಳೆಯರಾದಿಯಾಗಿ ಮಕ್ಕಳು ಹಾಗೂ ವಿವಿಧ ವಯೋಮಾನದವರು ಆವರಣ ಸ್ವಚ್ಛಗೊಳಿಸಿ, ದೇವರಿಗೆ ಪೂಜೆ ನೆರವೇರಿಸಿ ಸ್ವಾತಂತ್ರ್ಯ ದಿನವನ್ನು ಆಚರಿಸಿದರು.