ಸಿದ್ದಾಪುರ, ಆ. 24: ಇತ್ತೀಚೆಗೆ ಪಾಲಿಬೆಟ್ಟದ ಮಸ್ಕಲ್ ತೋಟದಲ್ಲಿ ಗಬ್ಬದ ಹಸುವನ್ನು ಹತ್ಯೆ ಮಾಡಿ, ಮಾಂಸ ಸಾಗಾಟ ಮಾಡಿದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಾಲಿಬೆಟ್ಟ ಸಮೀಪದ ಚೆನ್ನಂಗಿ ನಿವಾಸಿ ನೌಶಾದ್ (27) ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಈ ಹಿಂದೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.