ಗೋಣಿಕೊಪ್ಪ ವರದಿ, ಆ. 24: ಪ್ರವಾಹದಲ್ಲಿ ಮನೆಗೆ ನೀರು ನುಗ್ಗಿ ನಷ್ಟ ಅನುಭವಿಸಿದ ಆಟೋ ಚಾಲಕ ಸೋಮಶೇಖರ್ ಅವರಿಗೆ ಪೊನ್ನಂಪೇಟೆ ಶ್ರೀ ನಂದೀಶ್ವರ ಆಟೋ ಚಾಲಕರ ಸಂಘದ ವತಿಯಿಂದ 10 ಸಾವಿರ ನೆರವು ನೀಡಲಾಯಿತು.
ಸಂಘದ ಅಧ್ಯಕ್ಷ ಚಮ್ಮಟ್ಟೀರ ಶಾಂತ ಪೊನ್ನಪ್ಪ ಹಾಗೂ ಪದಾಧಿಕಾರಿಗಳು ವಿತರಣೆ ಮಾಡಿದರು. ಗೋಣಿಕೊಪ್ಪ ವೆಂಕಟಪ್ಪ ಬಡಾವಣೆಗೆ ತೋಡು ನೀರು ಹರಿದು ಮನೆಯ ಸಾಮಗ್ರಿ ಕಳೆದುಕೊಂಡ ಚಾಲಕನಿಗೆ ನೆರವಾಗುವ ಮೂಲಕ ಸ್ಪಂದಿಸಲಾಯಿತು.