ಮಡಿಕೇರಿ, ಆ. 24: ವಲಯ ಅರಣ್ಯ ಅಧಿಕಾರಿ, ಕುಶಾಲನಗರ ವಲಯ ಕುಶಾಲನಗರದಲ್ಲಿ ದಾಖಲಾದ ಅರಣ್ಯ ಮೊಕದ್ದಮೆ ಸಂಖ್ಯೆ 01/2018-19 ದಿನಾಂಕ 19.7.2018 ರಲ್ಲಿ ಅಮಾನತ್ತುಪಡಿಸಿದ ಪಿಕ್‍ಅಪ್ ಜೀಪು ಕೆಎಲ್ 59ಸಿ 3110 ಆರ್‍ಸಿ 4ಜಿಜಿಎಎ1ಎಚ್52990 ವಾಹನ ಮತ್ತು ಸೊತ್ತನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಈ ಆದೇಶವನ್ನು ಹೊರಡಿಸಿ 30 ದಿನಗಳ ಒಳಗೆ ಸಂಬಂಧಿಸಿದವರು ಯಾವದೇ ಮೇಲ್ಮನವಿಯನ್ನು ಸಲ್ಲಿಸದೇ ಇದ್ದಲ್ಲಿ ಇದೇ ಅಂತಿಮ ಆದೇಶವಾಗಿರುತ್ತದೆ. ಅಲ್ಲದೇ ಮೇಲ್ಮನವಿಯ ಅವಧಿ ಮೀರಿದ ಬಳಿಕ ವಾಹನ ಮತ್ತು ಸೊತ್ತನ್ನು ಕಾನೂನು ರೀತ್ಯಾ ವಿಲೇವಾರಿ ಮಾಡಲಾಗುವದು ಎಂದು ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್ ತಿಳಿಸಿದ್ದಾರೆ.