ನವದೆಹಲಿ, ಆ. 24: ಉಸಿರಾಟದ ಸಮಸ್ಯೆಯಿಂದಾಗಿ ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಗೆ (ಏಮ್ಸ್)ಗೆ ದಾಖಲಾಗಿದ್ದ ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ (67) ಅವರಿಂದು ನಿಧನರಾಗಿದ್ದಾರೆ. ಏಮ್ಸ್ನ ಹೃದ್ರೋಗ ವಿಭಾಗಕ್ಕೆ ಕಳೆದ ತಾ. 9 ರಂದು ಅರುಣ್ ಜೇಟ್ಲಿ ಅವರನ್ನು ದಾಖಲಿಸಲಾಗಿತ್ತು. ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರಿಂದು ಕೊನೆಯುಸಿರೆಳೆದರು.
ಇದಕ್ಕೂ ಮುನ್ನ ಜೇಟ್ಲಿ ಅವರನ್ನು ತಾ. 9 ರಂದು ಆಸ್ಪತ್ರೆಗೆ ದಾಖಲಿಸುತ್ತಲೇ ಏಮ್ಸ್ಗೆ ಧಾವಿಸಿದ್ದ ಗೃಹ ಸಚಿವ ಅಮಿತ್ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿ ಜೇಟ್ಲಿ ಅವರ ಆರೋಗ್ಯ ವಿಚಾರಿಸಿ ಕೊಂಡಿದ್ದರು. ಒಂದು ವರ್ಷದ ಹಿಂದೆ ನವದೆಹಲಿ, ಆ. 24: ಉಸಿರಾಟದ ಸಮಸ್ಯೆಯಿಂದಾಗಿ ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಗೆ (ಏಮ್ಸ್)ಗೆ ದಾಖಲಾಗಿದ್ದ ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ (67) ಅವರಿಂದು ನಿಧನರಾಗಿದ್ದಾರೆ. ಏಮ್ಸ್ನ ಹೃದ್ರೋಗ ವಿಭಾಗಕ್ಕೆ ಕಳೆದ ತಾ. 9 ರಂದು ಅರುಣ್ ಜೇಟ್ಲಿ ಅವರನ್ನು ದಾಖಲಿಸಲಾಗಿತ್ತು. ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರಿಂದು ಕೊನೆಯುಸಿರೆಳೆದರು.
ಇದಕ್ಕೂ ಮುನ್ನ ಜೇಟ್ಲಿ ಅವರನ್ನು ತಾ. 9 ರಂದು ಆಸ್ಪತ್ರೆಗೆ ದಾಖಲಿಸುತ್ತಲೇ ಏಮ್ಸ್ಗೆ ಧಾವಿಸಿದ್ದ ಗೃಹ ಸಚಿವ ಅಮಿತ್ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿ ಜೇಟ್ಲಿ ಅವರ ಆರೋಗ್ಯ ವಿಚಾರಿಸಿ ಕೊಂಡಿದ್ದರು. ಒಂದು ವರ್ಷದ ಹಿಂದೆ ಅವಧಿಯಲ್ಲಿ ಇಬ್ಬರು ನಾಯಕರನ್ನು ಕಳೆದು ಕೊಂಡಂತಾಗಿದೆ. ಈ ಇಬ್ಬರೂ ನಾಯಕರು ಕಿಡ್ನಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂಬುದು ಗಮನಾರ್ಹ.
1952ರಲ್ಲಿ ಪಂಜಾಬ್ನಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಅರುಣ್ ಜೇಟ್ಲಿ ಅವರು; ವಿದ್ಯಾರ್ಥಿ ದಿಸೆಯಲ್ಲೇ ಎಬಿವಿಪಿ ಸಂಘಟನೆ ಮೂಲಕ ಸಮಾಜಮುಖಿ ಆಂದೋಲನಕ್ಕೆ ಧುಮುಕಿದ್ದರು. ಕಾನೂನು ಪದವಿಯೊಂದಿಗೆ ಆರ್ಥಿಕ ತಜ್ಞರಾಗಿ ಪದವಿ ಪಡೆದಿದ್ದ ಅರುಣ್ ಜೇಟ್ಲಿ ಬಿಜೆಪಿಯ ಚಿಂತನಾಶೀಲ ನಾಯಕರಾಗಿದ್ದರು.
ಸರ್ವೋಚ್ಛ ನ್ಯಾಯಾಲಯದ ಶ್ರೇಷ್ಠ ವಕೀಲರಾಗಿ ಹೆಸರುಗಳಿಸಿದ್ದ ಅವರು; ತುರ್ತು ಪರಿಸ್ಥಿತಿಯ ದಿನಗಳಲ್ಲಿ 19 ತಿಂಗಳು ಕಾರಾಗೃಹವಾಸ ಅನುಭವಿಸಿದ್ದರು. ಹಿಂದೆ ಪ್ರಧಾನಿ ವಿ.ಪಿ. ಸಿಂಗ್ ಅವಧಿಯಲ್ಲಿ ಕಾನೂನು ಸಲಹೆಗಾರರಾಗಿ, ಆಟಲ್ಜೀ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕಳೆದ ಅವಧಿಗೆ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ರಕ್ಷಣಾಖಾತೆ, ವಿತ್ತಖಾತೆ ನಿರ್ವಹಿಸಿದ್ದ ಅರುಣ್ಜೇಟ್ಲಿ ಐದು ಬಾರಿ ಬಜೆಟ್ ಮಂಡನೆಯೊಂದಿಗೆ; ಇಡೀ ದೇಶಕ್ಕೆ ಏಕಸೂತ್ರ ತೆರಿಗೆ ಪದ್ಧತಿಯ ಜಿಎಸ್ಟಿ ಜಾರಿಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
ಸಂತಾಪ
ಬಿಜೆಪಿಯ ಹಿರಿಯ ಮುಖಂಡ ಅರುಣ್ ಜೇಟ್ಲಿ ಅವರ ನಿಧನಕ್ಕೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.