ವೀರಾಜಪೇಟೆ, ಆ. 24: ವೀರಾಜಪೇಟೆ ಭೂ ಮಾಪನ ಇಲಾಖೆ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿ ತಾ:30ರ ತನಕ ಪ್ರತಿಭಟನೆ ಆರಂಭಿಸಿದ್ದಾರೆ.

ಸರ್ಕಾರ ಭೂ ಮಾಪಕರಿಗೆ ತಿಂಗಳಿಗೆ 30 ಕಡತಗಳ ವಿಲೇವಾರಿಗೆ ಗುರಿಪಡಿಸಿರುವದಕ್ಕೆ ವಿರೋಧ, ಆಟೋ ಫೈಲ್ಸ್ ಅಲಾಟ್‍ಮೆಂಟ್ ವ್ಯವಸ್ಥೆಯನ್ನು ಕೈಬಿಡಬೇಕು. ಈ ಹಿಂದಿನಂತೆ 23 ಕಡತಗಳನ್ನು ವಿಲೇವಾರಿ ಮಾಡಲು ಈ ಹಿಂದಿನ ಸುತ್ತೋಲೆಯಂತೆ ಕಾರ್ಯ ನಿರ್ವಹಿಸಿಲು ಅನುವು ಮಾಡಿಕೊಡುವಂತೆ ನೌಕರರು ಬೇಡಿಕೆ ಸಲ್ಲಿಸಿದ್ದಾರೆ. ಪ್ರತಿಭಟನೆಯಲ್ಲಿ ಸರಕಾರಿ ನೌಕರರ ಒಕ್ಕೂಟದ ನಿರ್ದೇಶಕರು, ಭೂ ಮಾಪಕರುಗಳು ಹಾಗೂ ಕಚೇರಿ ಸಿಬ್ಬಂದಿಗಳು ಭಾಗವಹಿಸಿದ್ದರು.