ಶನಿವಾರಸಂತೆ, ಆ. 24: ಶನಿವಾರಸಂತೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಟಿ.ಆರ್. ಗಿರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಹಕಾರ ಸಂಘವು 23.5.1951ರಲ್ಲಿ ಸ್ಥಾಪನೆಯಾಗಿದ್ದು; 2226 ಮಂದಿ ಸದಸ್ಯರಿದ್ದು, ರೂ. 1,15,82,356 ಪಾಲು ಹಣ ಹೊಂದಿರುತ್ತದೆ. ಸಂಘದಲ್ಲಿ ಸದಸ್ಯರು ಮತ್ತು ಸದಸ್ಯೇತರರಿಂದ ರೂ. 11,81,20,962 ಠೇವಣಿಯನ್ನು ಪಡೆಯಲಾಗಿದ್ದು; ವಿವಿಧ ಸಾಲಗಳ ರೂಪದಲ್ಲಿ ಸದಸ್ಯರು ಮತ್ತು ಸದಸ್ಯೇತರರಿಗೆ ರೂ. 16,92,53,699 ಸಾಲ ವಿತರಣೆ ಮಾಡಲಾಗಿದೆ. ಸಂಘದಲ್ಲಿ ಒಟ್ಟು ರೂ. 3,87,33,745 ವ್ಯಾಪಾರ ವಹಿವಾಟು ನಡೆಸಿ ರೂ. 19,78,995 ವ್ಯಾಪಾರ ಲಾಭಗಳಿಸಲಾಗಿದೆ. ಪ್ರಸಕ್ತ ಸಾಲಿಗೆ ರೂ. 41,94,769 ನಿವ್ವಳ ಲಾಭಗಳಿಸಿರುತ್ತದೆ ಎಂದರು. ಚರ್ಚೆಯಲ್ಲಿ ಸದಸ್ಯರುಗಳಾದ ನಟರಾಜ್, ಸಿ.ಕೆ. ಕೊಮಾರಪ್ಪ, ಡಿ.ಪಿ. ಬೋಜಪ್ಪ, ದೊಡ್ಡಪ್ಪ, ಎ.ಎಂ. ಆನಂದ, ಚಂದ್ರಶೇಖರ್, ಚಂದ್ರೇಗೌಡ, ಆರ್.ಪಿ. ಮೋಹನ್, ಜಗನ್ಪಾಲ ಇತರರು ಪಾಲ್ಗೊಂಡಿದ್ದರು.
ಸಭೆಯಲ್ಲಿ ಉಪಾಧ್ಯಕ್ಷ ಡಿ. ಅರವಿಂದ್, ನಿರ್ದೇಶಕರುಗಳಾದ ಕೆ.ಪಿ. ಪುಷ್ಪಾ, ಸವಿತ ಸುರೇಶ್, ಡಿ.ಈ. ಬಸಪ್ಪ, ಜೆ.ಸಿ. ಲೋಕೇಶ್, ಎಸ್.ಸಿ. ಶರತ್ಶೇಖರ್, ಆರ್.ಎಂ. ಭುವನ್, ಎಸ್.ವಿ. ಜಗದೀಶ್, ಎಸ್.ಎನ್. ರಘು, ವ್ಯವಸ್ಥಾಪಕ ಡಿ.ಎಂ. ಉತ್ತಯ್ಯ, ಸಹಕಾರ ಸಂಘಗಳ ಮೇಲ್ವಿಚಾರಕ ಉತ್ತಯ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಈ. ದೊಡ್ಡಯ್ಯ ಹಾಗೂ ಆಡಳಿತ ಮಂಡಳಿ ಸಿಬ್ಬಂದಿಗಳು ಉಪಸ್ಥಿತರಿದ್ದು, ಕಾರ್ಯನಿರ್ವಹಣಾಧಿಕಾರಿ ದೊಡ್ಡಯ್ಯ ಸ್ವಾಗತಿಸಿ, ನಿರೂಪಣೆ ಮಾಡಿದರು. ನಿರ್ದೇಶಕ ಭುವನ್ ವಂದಿಸಿದರು.