ಸೋಮವಾರಪೇಟೆ, ಆ. 24: ಸಮೀಪದ ಸಿದ್ಧಲಿಂಗಪುರ-ಅರಸಿನಗುಪ್ಪೆ ಗ್ರಾಮದಲ್ಲಿರುವ ಶ್ರೀ ಮಂಜುನಾಥ ಮತ್ತು ನವನಾಗ ಸನ್ನಿಧಿಯಲ್ಲಿ ಮಾಸಿಕ ಪಂಚಮಿ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು.

ದೇವಾಲಯದ ಪ್ರಧಾನ ಅರ್ಚಕ ರಾಜೇಶ್‍ನಾಥ್ ಗುರೂಜಿ ಅವರ ಪೌರೋಹಿತ್ಯದಲ್ಲಿ ಅರ್ಚಕ ಜಗದೀಶ್ ಉಡುಪ ನೇತೃತ್ವದ ಪುರೋಹಿತರಿಂದ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.

ಮಂಜುನಾಥ ಸನ್ನಿಧಿಯಲ್ಲಿ ಗಣಪತಿ ಹೋಮ, ವಿವಿಧ ಅಭಿಷೇಕ, ಮಹಾಮಂಗಳಾರತಿ, ನವನಾಗ ಸನ್ನಿಧಿಯಲ್ಲಿ ತಂಬಿಲ ಸೇವೆ, ವಿವಿಧ ಅಭಿಷೇಕ ಸೇರಿದಂತೆ ಪಂಚಮಿ ಪೂಜಾ ಕಾರ್ಯಗಳು ನಡೆದವು.