ಮಡಿಕೇರಿ, ಆ. 23: ಕೇಂದ್ರ ಸರ್ಕಾರದಿಂದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿರುವ “ಸಖಿ ಒನ್ ಸ್ಟಾಪ್ ಸೆಂಟರ್”ಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ವಿದ್ಯಾರ್ಹತೆ ನಿಗದಿಪಡಿಸಿ ಕೇಂದ್ರ ಆಡಳಿತಾಧಿಕಾರಿ, ಕೌನ್ಸಿಲರ್, ವಿಷಯ ನಿರ್ವಾಹಕರು/ ಸಮಾಜ ಸೇವಾ ಕಾರ್ಯಕರ್ತರು, ಪ್ಯಾರಾಲೀಗಲ್ ಪರ್ಸನಲ್/ ಲಾಯರ್, ತಾಂತ್ರಿಕ ಸಿಬ್ಬಂದಿ, ರಕ್ಷಕರು, ಮಹಿಳಾ ಸಹಾಯಕರು, ಸ್ವಚ್ಛತಾಗಾರರು ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೇಂದ್ರ ಆಡಳಿತಾಧಿಕಾರಿ ಹುದ್ದೆಗೆ ಎಲ್ಎಲ್ಬಿ/ಎಂಎಸ್ಡಬ್ಲ್ಯೂ.,್ಠ ಆಗಿರಬೇಕು. ಸರ್ಕಾರಿ/ಸರ್ಕಾರೇತರ ಯೋಜನೆ/ಕಾರ್ಯಕ್ರಮಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸಂಬಂಧಿಸಿದಂತೆ ಕನಿಷ್ಟ 5 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಸ್ಥಳೀಯ ಅಭ್ಯರ್ಥಿಯಾಗಿರಬೇಕು. 45 ವರ್ಷದೊಳಗಿರಬೇಕು. ಮಾಸಿಕ ಗೌರವಧನ ರೂ. 25 ಸಾವಿರ, ಕೌನ್ಸಿಲರ್ (ಮಹಿಳಾ ಅಭ್ಯರ್ಥಿಗೆ ಮೀಸಲು)ಹುದ್ದೆ-1, ಎಂ.ಎಸ್.ಡಬ್ಲ್ಯೂ/ ಕ್ಲಿನಿಕಲ್ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಆಗಿರಬೇಕು. ಜಿಲ್ಲಾ/ ರಾಜ್ಯಮಟ್ಟದ ಮೆಂಟಲ್ ಹೆಲ್ತ್ ಇನ್ಸ್ಟಿಟ್ಯೂಟ್/ ಕ್ಲಿನಿಕ್ನಲ್ಲಿ ಕೌನ್ಸಿಲರ್/ ಸೈಕೋಥೆರಪಿಸ್ಟ್ ಆಗಿ 3 ವರ್ಷ ಕೆಲಸ ನಿರ್ವಹಿಸಿದ ಅನುಭವ ಹೊಂದಿರಬೇಕು. 45 ವರ್ಷದೊಳಗಿರಬೇಕು. ಮಾಸಿಕ ಗೌರವಧನ ರೂ. 15 ಸಾವಿರ.
ವಿಷಯ ನಿರ್ವಾಹಕರು/ ಸಮಾಜ ಸೇವಾ ಕಾರ್ಯಕರ್ತರು (ಮಹಿಳಾ ಅಭ್ಯರ್ಥಿಗಳಿಗೆ ಮೀಸಲು) ಹುದ್ದೆ-3. ಎಲ್ಎಲ್ಬಿ.,/ ಎಂ.ಎಸ್.ಡಬ್ಲ್ಯೂ. ವಿದ್ಯಾರ್ಹತೆ ಹೊಂದಿರಬೇಕು. ಸರ್ಕಾರಿ/ ಸರ್ಕಾರೇತರ ಯೋಜನೆ/ ಕಾರ್ಯಕ್ರಮಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸಂಬಂಧಿಸಿದಂತೆ ಕನಿಷ್ಟ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಮತ್ತು ಸ್ಥಳೀಯ ಅಭ್ಯರ್ಥಿಯಾಗಿರಬೇಕು. 45 ವರ್ಷದೊಳಗಿರಬೇಕು. ಮಾಸಿಕ ಗೌರವಧನ ರೂ. 10 ಸಾವಿರ.
ಪ್ಯಾರಾಲೀಗಲ್ ಪರ್ಸನಲ್/ ಲಾಯರ್ (ಮಹಿಳಾ ಅಭ್ಯರ್ಥಿಗೆ ಮೀಸಲು) ಹುದ್ದೆ-1, ಎಲ್.ಎಲ್.ಬಿ. / ಸಮಾಜ ವಿಜ್ಞಾನ ವಿಷಯದಲ್ಲಿ ಪ್ಯಾರಾ ಲೀಗಲ್ ಪದವಿ. ಸರ್ಕಾರಿ/ ಸರ್ಕಾರೇತರ ಯೋಜನೆ/ ಕಾರ್ಯಕ್ರಮಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸಂಬಂಧಿಸಿದಂತೆ ಕನಿಷ್ಟ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಮತ್ತು ಸ್ಥಳೀಯ ಅಭ್ಯರ್ಥಿಯಾಗಿರಬೇಕು. 45 ವರ್ಷದೊಳಗಿರಬೇಕು. ಮಾಸಿಕ ಗೌರವಧನ ರೂ. 5 ಸಾವಿರ.
ತಾಂತ್ರಿಕ ಸಿಬ್ಬಂದಿ(ಮಹಿಳೆ/ ಪುರುಷ) ಹುದ್ದೆ-2, ಯಾವದಾದರೊಂದು ಪದವಿಯೊಂದಿಗೆ ಡಿಪ್ಲೋಮಾ ಇನ್ ಕಂಪ್ಯೂಟರ್/ ಐಟಿ ಹೊಂದಿರಬೇಕು. ಡಾಟಾ ಮ್ಯಾನೇಜ್ಮೆಂಟ್, ಡಾಕ್ಯುಮೆಂಟೇಷನ್, ವೆಬ್ಬೇಸ್ಡ್ ರಿಪೋರ್ಟಿಂಗ್, ಜಿಲ್ಲಾ/ ರಾಜ್ಯ/ ಸರ್ಕಾರೇತರ/ ಮಾಹಿತಿ ತಂತ್ರಜ್ಞಾನ ಆಧಾರಿತ ಸಂಸ್ಥೆಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬಗ್ಗೆ ಕನಿಷ್ಟ 3 ವರ್ಷಗಳ ಅನುಭವ ಹೊಂದಿರಬೇಕು. 45 ವರ್ಷದೊಳಗಿರಬೇಕು. ಮಾಸಿಕ ಗೌರವಧನ ರೂ. 15 ಸಾವಿರ.
ರಕ್ಷಕರು (ಮಹಿಳೆ/ಟ್ರಾನ್ಸ್ಜೆಂಡರ್) ಹುದ್ದೆ-3 ಎಸ್.ಎಸ್.ಎಲ್.ಸಿ.. ಸರ್ಕಾರಿ/ ಹೆಸರಾಂತ ಸಂಸ್ಥೆಗಳಲ್ಲಿ ಸೆಕ್ಯೂರಿಟಿ ಆಗಿ ಕನಿಷ್ಟ 2 ವರ್ಷ ಕೆಲಸ ನಿರ್ವಹಿಸಿದ ಅನುಭವ ಹೊಂದಿರಬೇಕು. ಸ್ಥಳೀಯ ಅಭ್ಯರ್ಥಿಯಾಗಿರಬೇಕು. 24*7 ರಂತೆ ಶಿಫ್ಟ್ನಲ್ಲಿ ಕೆಲಸ ನಿರ್ವಹಿಸಬೇಕು. 45 ವರ್ಷದೊಳಗಿರಬೇಕು. ಮಾಸಿಕ ರೂ. 8 ಸಾವಿರ.
ಮಹಿಳಾ ಸಹಾಯಕರು, ಸ್ವಚ್ಛತಾಗಾರರು ಹುದ್ದೆ-2. 5ನೇ ತರಗತಿ, ಸಹಾಯಕರು, ಸ್ವಚ್ಛತಾಗಾರರಾಗಿ ಕನಿಷ್ಟ 3 ವರ್ಷ ಕೆಲಸ ನಿರ್ವಹಿಸಿದ ಅನುಭವ ಹೊಂದಿರಬೇಕು. ಸ್ಥಳೀಯ ಅಭ್ಯರ್ಥಿಯಾಗಿರಬೇಕು. 45 ವರ್ಷದೊಳಗಿರಬೇಕು. ಮಾಸಿಕ ಗೌರವಧನ ರೂ. 4500.
ಅರ್ಜಿ ಸಲ್ಲಿಸಲು ತಾ. 26 ಕೊನೆ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಡಿಕೇರಿ ದೂ. 08272 298379 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಸಾಲ ಸೌಲಭ್ಯಕ್ಕೆ: ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮವು ಅನುಷ್ಠಾನಗೊಳಿಸುತ್ತಿರುವ ‘’ಅರಿವು (ಫ್ರೆಶ್ ಮತ್ತು ರೆನ್ಯೂವಲ್’’) ವಿದ್ಯಾಭ್ಯಾಸ ಸಾಲವನ್ನು ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ವಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಹಾಗೂ ಆಂಗ್ಲೋ ಇಂಡಿಯನ್ ಜನಾಂಗದವರಿಗೆ ತಾಂತ್ರಿಕ ವೃತ್ತಿಪರ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನಿಗಮದಿಂದ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ, ಬಿಇ, ಎಂಬಿಬಿಎಸ್, ಎಂಬಿಎ, ಎಂಸಿಎ, ಎಂಟೆಕ್, ಎಂ.ಡಿ, ಬಿಫಾರ್ಮ, ಡಿಎಡ್, ಐಟಿಐ, ಡಿಪ್ಲೋಮಾ, ಬಿಎಸ್ಸಿ ನರ್ಸಿಂಗ್, ಬಿಡಿಎಸ್, ಬಿಎಡ್, ಎಂಎ, ಪಿಎಚ್ಡಿ, ಎಂ.ಕಾಂ, ಎಂಎಸ್ಸಿ, ಎಂ ಫಾರ್ಮಾ, ಎಲ್ಎಲ್ಬಿ ಹಾಗೂ ಇತರ ಕೋರ್ಸುಗಳಿಗೆ ರೂ. 10 ಸಾವಿರಗಳಿಂದ ವ್ಯಾಸಂಗಕ್ಕೆ ಅನುಗುಣವಾಗಿ ರೂ. 75 ಸಾವಿರಗಳ ವರೆಗೆ ಸಾಲ ಸೌಲಭ್ಯಗಳನ್ನು ಕಲ್ಪಿಸಿ, ಸಾಲಕ್ಕೆ ಶೇ. 2 ರಂತೆ ಸೇವಾ ಶುಲ್ಕ ಪಡೆಯಲಾಗುವದು. ಅರ್ಜಿದಾರರ ವಾರ್ಷಿಕ ಆದಾಯ 6 ಲಕ್ಷ ರೂ.ಗಳ ಒಳಗಿರಬೇಕು. ಆಸಕ್ತ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ನಿಗಮದ ವೆಬ್ಸೈಟ್ ತಿತಿತಿ.ಞmಜಛಿ.ಞಚಿಡಿ.ಟಿiಛಿ.iಟಿ/ಚಿಡಿivu2 ಮತ್ತು ಕಚೇರಿ ದೂರವಾಣಿ ಸಂಖ್ಯೆ : 08272-220449 ನ್ನು ಸಂಪರ್ಕಿಸಬಹುದು.
ಅರಿವು ಸಾಲ ಯೋಜನೆಗೆ ಸಲ್ಲಿಸಬೇಕಾದ ದಾಖಲಾತಿಗಳ ವಿವರ: ಆನ್ಲೈನ್ನಲ್ಲಿ ಭರ್ತಿ ಮಾಡಿದ ಅರ್ಜಿ, ವಿದ್ಯಾರ್ಥಿಯ 4 ಭಾವಚಿತ್ರ ಹಾಗೂ ಪೋಷಕರ 2+2 ಭಾವಚಿತ್ರ, ವ್ಯಾಸಂಗ ದೃಢೀಕರಣ ಪತ್ರ (ಸಂಬಂಧಪಟ್ಟ ಕಾಲೇಜು ಪ್ರಾಂಶುಪಾಲರಿಂದ) ಶುಲ್ಕ ರಶೀದಿ, ಕಾಲೇಜಿನ ಬ್ಯಾಂಕ್ ಮಾಹಿತಿ, ಎಸ್ಎಸ್ಎಲ್ಸಿ ಅಂಕಪಟ್ಟಿ ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಕಳೆದ ಸಾಲಿನ ಎಲ್ಲಾ ಅಂಕಪಟ್ಟಿಯ ದೃಢೀಕೃತ ಪ್ರತಿ ಪ್ರಾಂಶುಪಾಲರಿಂದ ದೃಢೀಕರಿಸಿ ಸಲ್ಲಿಸಬೇಕು.
ಈ ಯೋಜನೆಯ ಲಾಭ ಪಡೆಯಲು ಆನ್ಲೈನ್ ಮುಖೇನ ವಿದ್ಯಾರ್ಥಿಗಳು ಮಾಹಿತಿ ಭರ್ತಿ ಮಾಡಿ, ಸಾಪ್ಟ್ ಕಾಫಿಯನ್ನು ಎರಡು ಪ್ರತಿಗಳಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾ ವ್ಯವಸ್ಥಾಪಕರು, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮೌಲನಾ ಭವನ, ಗ್ರಾಮಾಂತರ ಪೊಲೀಸ್ ಠಾಣೆ ಹತ್ತಿರ, ಕಾಲೇಜು ರಸ್ತೆ, ಮಡಿಕೇರಿ ಈ ವಿಳಾಸಕ್ಕೆ ಪ್ರಿಂಟೌಟ್ ಪಡೆದ ಅರ್ಜಿಗಳನ್ನು ಸಲ್ಲಿಸಲು ಸೂಚಿಸಿದೆ. ಅರ್ಜಿ ಸಲ್ಲಿಸಲು ಸೆಪ್ಟಂಬರ್ 30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ : 08272-220449 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.