ವೀರಾಜಪೇಟೆ, ಆ. 23: ಜಳಪ್ರಳಯಕ್ಕೆ ತುತ್ತಾದ ತೋರ ಗ್ರಾಮದಲ್ಲಿ ಸಂಭವಿಸಿದ ಭೂ ಕುಸಿತದ ಸ್ಥಳಕ್ಕೆ ಕೊಡಗು- ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಇಂದು ಭೇಟಿ ನೀಡಿದರು.ಭೂ ಕುಸಿತದಲ್ಲಿ ಪ್ರಾಣ ಕಳೆದು ಕೊಂಡ ಸಂತ್ರಸ್ತ ಕುಟುಂಬದ ಪ್ರಭು ಕುಮಾರ್ ಮತ್ತು ಹರೀಶ್ ಅವರಿಗೆ ಸಾಂತ್ವನದ ಮಾತುಗಳು ಹೇಳಿದರು. ಘಟನೆಯ ಮಾಹಿತಿ ಪಡೆದರು. ಕಾಣೆಯಾದವರ ಶೋಧ ಕಾರ್ಯಾ ಚರಣೆಯನ್ನು ವೀಕ್ಷಣೆ ಮಾಡಿ ಕಾರ್ಯಾಚರಣೆಯ ತಂಡದ ವೀರಾಜಪೇಟೆ, ಆ. 23: ಜಳಪ್ರಳಯಕ್ಕೆ ತುತ್ತಾದ ತೋರ ಗ್ರಾಮದಲ್ಲಿ ಸಂಭವಿಸಿದ ಭೂ ಕುಸಿತದ ಸ್ಥಳಕ್ಕೆ ಕೊಡಗು- ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಇಂದು ಭೇಟಿ ನೀಡಿದರು.
ಭೂ ಕುಸಿತದಲ್ಲಿ ಪ್ರಾಣ ಕಳೆದು ಕೊಂಡ ಸಂತ್ರಸ್ತ ಕುಟುಂಬದ ಪ್ರಭು ಕುಮಾರ್ ಮತ್ತು ಹರೀಶ್ ಅವರಿಗೆ ಸಾಂತ್ವನದ ಮಾತುಗಳು ಹೇಳಿದರು. ಘಟನೆಯ ಮಾಹಿತಿ ಪಡೆದರು. ಕಾಣೆಯಾದವರ ಶೋಧ ಕಾರ್ಯಾ ಚರಣೆಯನ್ನು ವೀಕ್ಷಣೆ ಮಾಡಿ ಕಾರ್ಯಾಚರಣೆಯ ತಂಡದ ಜೀವನ ಮಾರ್ಗವನ್ನು ಕಂಡುಕೊಳ್ಳಲು ಸರ್ಕಾರಿ ಭೂಮಿಯನ್ನು ಕೃಷಿಯೇತರ ಕಾರ್ಯಕ್ಕೆ ಪರಿವರ್ತಿಸಿ ಜೀವನ ಸಾಗಿಸಿಸುತ್ತಿರುವದು ತಿಳಿದು ಬಂದಿದೆ. ಬೆಳೆಗಾರರು ಪ್ರಕೃತಿ ವಿಕೋಪದಲ್ಲಿ ಫಸಲು ಬರುವ ಭೂಮಿಯನ್ನು ಕಳೆದು ಕೊಂಡಿದ್ದಾರೆ; ಇವರಿಗೆ ಜಿಲ್ಲಾಡಳಿತ ಮತ್ತು ಸ್ಥಳೀಯ ಅಡಳಿತದೊಂದಿಗೆ ಸಮಾಲೋಚನೆ ಮಾಡಿ ಪರಿಹಾರ ಒದಗಿಸಲಾಗುತ್ತದೆ ಎಂದು ಹೇಳಿದರು.
ತಾಲೂಕು ತಹಶೀಲ್ದಾರ್ ಪುರಂದರ ಅವರಿಂದ ಪರಿಹಾರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಸಂಸದರ ತೋರ ಭೇಟಿ ಸಂದರ್ಭದಲ್ಲಿ ಕಂದಾಯ ಅಧಿಕಾರಿ ಪಳಂಗಪ್ಪ, ತಾಲೂಕು ಬಾ.ಜ.ಪ ಅಧÀ್ಯಕ್ಷ ಅರುಣ್ ಭೀಮಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ಎಂ, ಗಣೇಶ್, ಗ್ರಾಮ ಪಂಚಾಯಿತಿ ಪಿ.ಡಿ.ಒ ಪ್ರಮೋದ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಂತ್ರಸ್ತ ಕುಟುಂಬಗಳ ಸದಸ್ಯರು ಹಾಜರಿದ್ದರು.
-ಕೆ.ಕೆ.ಎಸ್. ವೀರಾಜಪೇಟೆ