ಮಡಿಕೇರಿ, ಆ. 23 : ಅತ್ಯಂತ ಸೂಕ್ಷ್ಮ ಮಣ್ಣಿನ ಗುಣ ಹೊಂದಿರುವ ಪಶ್ಚಿಮಘಟ್ಟ ಪ್ರದೇಶದಲ್ಲಿ ಬರುವ ತಲಕಾವೇರಿಯ ಚೇರಂಗಾಲದಲ್ಲಿ ರೆಸಾರ್ಟ್ ನಿರ್ಮಿಸಲು ಯೋಜನೆ ರೂಪಿಸಿ, ಕಾಮಗಾರಿಯನ್ನು ಆರಂಭಿಸಿರುವ ಕಂದಾಯ ಅಧಿಕಾರಿ ಯನ್ನು ತಕ್ಷಣ ಅಮಾನತು ಮಾಡಿ ಬಂಧಿಸಬೇಕೆಂದು ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ ಒತ್ತಾಯಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಪ್ರಮುಖರಾದ ಉಳ್ಳಿಯಡ ಎಂ.ಪೂವಯ್ಯ, ಅರಣ್ಯ ಇಲಾಖೆ ಸಂಬಂಧಿಸಿದ ಕಂದಾಯ ಅಧಿಕಾರಿ ವಿರುದ್ಧ ಭೂಕಬಳಿಕೆ ಮತ್ತು ಮರಗಳ ಹನನದ ದೂರನ್ನು ದಾಖಲಿಸಿ ಕೊಂಡಿದ್ದರು ಇಲ್ಲಿಯವರೆಗೆ ಬಂಧಿಸದೆ ಇರುವದನ್ನು ಗಮನಿಸಿದರೆ ಪ್ರಕರಣದ ಹಿಂದೆ ಪ್ರಭಾವಿಗಳ ಕೈವಾಡವಿರುವದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.

ಜಿಲ್ಲಾಡಳಿತ ಕೂಡ ಯಾವದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದೆ ಎಂದು ಟೀಕಿಸಿದ ಅವರು ಕಂದಾಯ ಅಧಿಕಾರಿಯನ್ನು ಬಂಧಿಸದೆ ಇದ್ದಲ್ಲಿ ಶಾಂತಿಯುತವಾಗಿಯೇ ಹೋರಾಟ ವನ್ನು ತೀವ್ರಗೊಳಿ ಸುವದಾಗಿ ಎಚ್ಚರಿಕೆ ನೀಡಿದರು.

ಭೂ ಕಬಳಿಕೆಯ ಆರೋಪ ಎದುರಿಸುತ್ತಿರುವ ಅಧಿಕಾರಿ ಕಳೆದ ವರ್ಷ ಸಂಭವಿಸಿದ ಅತಿವೃಷ್ಟಿಯಲ್ಲಿ ತಮ್ಮ ಆಸ್ತಿಗೂ ಹಾನಿಯಾಗಿದೆ ಎಂದು ಹೇಳಿ ಸರ್ಕಾರದಿಂದ ಎರಡು ಕಂತುಗಳಲ್ಲಿ ತಲಾ 15,500 ರಂತೆ ಒಟ್ಟು 31 ಸಾವಿರ ರೂ.ಗಳನ್ನು ಪಡೆದುಕೊಂಡಿದ್ದಾರೆ. ಈ ಹಣವನ್ನು ಬಡ್ಡಿ ಸಹಿತ ಸರ್ಕಾರ ವಸೂಲಿ ಮಾಡ ಬೇಕೆಂದು ಪೂವಯ್ಯ ಒತ್ತಾಯಿಸಿದರು. ಪವಿತ್ರ ಕ್ಷೇತ್ರ ತಲಕಾವೇರಿಯ ರಕ್ಷಣೆ ಗಾಗಿ ಯಾವದೇ ತ್ಯಾಗಕ್ಕೂ ಸಿದ್ಧವಿ ರುವದಾಗಿ ತಿಳಿಸಿದರು.(ಮೊದಲ ಪುಟದಿಂದ) ವೇದಿಕೆಯ ಕಾನೂನು ಸಲಹೆಗಾರ ಕಿರಿಯಮಾಡ ರತನ್ ತಮ್ಮಯ್ಯ ಮಾತನಾಡಿ, ಅಕ್ರಮ-ಸಕ್ರಮದಡಿ ಭೂ ಮಂಜೂರಾತಿಯಾಗಬೇಕಾದರೆ, ಆ ಭೂಮಿಯಲ್ಲಿ ಕೃಷಿ ಮಾಡಿರಬೇಕು ಅಥವಾ ತೋಟವನ್ನಾಗಿ ಪರಿವರ್ತಿಸಿರಬೇಕು. ಆದರೆ ಕಂದಾಯ ಅಧಿಕಾರಿ ರೆಸಾರ್ಟ್ ನಿರ್ಮಿಸುತ್ತಿರುವ ಜಾಗ ದಟ್ಟ ಅರಣ್ಯವಾಗಿದ್ದು, ಈ ಭೂ ಮಂಜೂರಾತಿಯನ್ನು ತಕ್ಷಣ ರದ್ದು ಗೊಳಿಸಬೇಕೆಂದು ಒತ್ತಾಯಿಸಿದರು.

ವೇದಿಕೆಯ ಸಂಚಾಲಕ ಕೊಕ್ಕಲೆರ ಕಾರ್ಯಪ್ಪ ಮಾತನಾಡಿ, ಕಂದಾಯ ಅಧಿಕಾರಿ ತಮ್ಮ ತಾಯಿಗೆ ಮಂಜೂರಾದ ಜಾಗವನ್ನು ತಮ್ಮ ಹೆಸರಿಗೆ ಮಾರ್ಪಡಿಸಿಕೊಂಡಿದ್ದು, ಈ ಮಂಜೂರಾತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಹಿಂದಿನ ಉಪ ವಿಭಾಗಾಧಿಕಾರಿ ನಂಜುಂಡೇಗೌಡ ಅವರು ಮಂಜೂರಾತಿಯನ್ನು ರದ್ದುಗೊಳಿಸಿರುವ ಬಗ್ಗೆ ಮಾಹಿತಿ ಇದೆ. ಜಿಲ್ಲಾಧಿಕಾರಿಗಳು ತಕ್ಷಣ ಸಂಬಂಧಿಸಿದ ಕಡತವನ್ನು ಪರಿಶೀಲಿಸಿ, ಉಪವಿಭಾಗಾಧಿಕಾರಿಗಳು ಭೂ ಮಂಜೂರಾತಿಯನ್ನು ರದ್ದು ಗೊಳಿಸಲು ನೀಡಿದ ಆದೇಶವನ್ನೆ ಎತ್ತಿ ಹಿಡಿಯಬೇಕೆಂದು ಒತ್ತಾಯಿಸಿದರು.

ತಲಕಾವೇರಿ ಸಮೀಪದಲ್ಲೆ ರೆಸಾರ್ಟ್ ನಿರ್ಮಾಣಗೊಂಡರೆ ನೀರಿನ ವ್ಯವಸ್ಥೆಗಾಗಿ ಕೊಳವೆ ಬಾವಿಗಳನ್ನು ಕೊರೆಯುವದರಿಂದ ನೀರಿನ ಕೊರತೆ ಉಂಟಾಗಿ ಪವಿತ್ರ ಕ್ಷೇತ್ರ ಬರಡಾಗುವ ಆತಂಕವಿದೆ ಎಂದರು. ಯುನೈಟೆಡ್ ಕೊಡವ ಆರ್ಗನೈಸೇಷನ್ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ಸಂಪೂರ್ಣವಾಗಿ ಕಾನೂನನ್ನು ಉಲ್ಲಂಘಿಸಿ ರೆಸಾರ್ಟ್ ನಿರ್ಮಾಣಕ್ಕೆ ಕಾಮಗಾರಿ ನಡೆಸಲಾಗಿದ್ದು, ಧಾರ್ಮಿಕ ಕೇಂದ್ರಕ್ಕೆ ಧಕ್ಕೆಯಾದರೆ ಸಹಿಸಲು ಸಾಧ್ಯವಿಲ್ಲವೆಂದರು. ಅಕ್ರಮವಾಗಿ ನಿರ್ಮಾಣಗೊಂಡಿರುವ ಕೆರೆಯಿಂದ ಗುಡ್ಡ ಕುಸಿದರೆ ಕೆಳ ಭಾಗದಲ್ಲಿರುವ ಕಾಲೋನಿಗಳಿಗೆ ಹಾನಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಚೇರಂಗಾಲ ಗ್ರಾಮಸ್ಥ ಸಿರಕÀಜೆ ನಾಗೇಶ್ ಮಾತನಾಡಿ, ತಲಕಾವೇರಿಯಿಂದ ಕೇವಲ 700 ಮೀ. ಅಂತರದಲ್ಲಿ ಅಕ್ರಮವಾಗಿ ಭೂಮಿಯನ್ನು ಪಡೆದು ಮರಗಳನ್ನು ಕಡಿಯಲಾಗಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರ ಬಯಲು ಸೀಮೆಯಾಗುವ ಸಾಧ್ಯತೆ ಇದೆ ಎಂದು ಆರೋಪಿಸಿದರು. ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಕುಟುಂಬಗಳಿದ್ದು, ಗುಡ್ಡ ಕುಸಿತ ಉಂಟಾದರೆ ಈ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ. ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯನ್ನು ಬಂಧಿಸದಿದ್ದಲ್ಲಿ ಚೇರಂಗಾಲದಲ್ಲಿರುವ ಸುಮಾರು 300 ಕುಟುಂಬಗಳು ಒಗ್ಗೂಡಿ ಉಗ್ರ ಹೋರಾಟಕ್ಕೆ ಇಳಿಯುವ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪ್ರಮುಖರಾದ ಮಣವಟ್ಟೀರ ದೊರೆ ಸೋಮಣ್ಣ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ.