ಮಡಿಕೇರಿ, ಆ. 21: ಪ್ರಕೃತಿ ವಿಕೋಪಕ್ಕೆ ಸಿಲುಕಿ ನಷ್ಟಕ್ಕೊಳಗಾಗಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನ್ಯೂಜಿಲ್ಯಾಂಡ್‍ನಲ್ಲಿ ನೆಲೆಸಿರುವ ಮಾಳೇಟಿರ ಪ್ರವೇಶ್ ಕಾರ್ಯಪ್ಪ ಅವರು ರೂ. 25 ಸಾವಿರ ರೂಪಾಯಿಗಳ ನೆರವು ನೀಡಿದ್ದಾರೆ. ಇತ್ತೀಚೆಗೆ ಕೊಡಗು ಇನ್ ನೀಡ್ ಫೌಂಡೇಶನ್‍ನ ಆಶ್ರಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ಒಟ್ಟು ಐವರು ವಿದ್ಯಾರ್ಥಿಗಳಿಗೆ ಈ ನೆರವನ್ನು ವಿತರಿಸಲಾಯಿತು. ಫೌಂಡೇಶನ್ ಅಧ್ಯಕ್ಷ ಮಾಳೇಟಿರ ಕರುಂಬಯ್ಯ, ಪೊಯ್ಯೇಟಿರ ಭಾನುಮತಿ, ಮಕ್ಕಳು, ಪೋಷಕರು ಹಾಜರಿದ್ದರು.