ಮಡಿಕೇರಿ, ಆ. 22: ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಸ್ಕೂಲ್‍ನಲ್ಲಿ ಮನೆ ಮನೆ ಕಾವ್ಯಗೋಷ್ಠಿ ಪರಿವಾರದ ಕನ್ನಡ ಕವಿಗೋಷ್ಠಿ ಕಾರ್ಯಕ್ರಮ ತಾ. 25 ರಂದು ಬೆಳಿಗ್ಗೆ 10 ಗಂಟೆಗೆ ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಸ್ಕೂಲ್ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ.

ಕೂರ್ಗ್ ಪಬ್ಲಿಕ್ ಸ್ಕೂಲ್ ಮತ್ತು ಎಂ.ಬಿ. ಜಯಲಕ್ಷ್ಮಿ ಇವರ ಸಹಭಾಗಿತ್ವದ ಕಾರ್ಯಕ್ರಮದಲ್ಲಿ ಕವನ ವಾಚನ, ಗೀತಗಾಯನ, ಕುಂಚ ಗಾಯನ, ಕಿರಿಯ ವಯಸ್ಸಿನ ಸಂಗೀತದ ಸಾಧಕ ಎಂ.ಡಿ. ಆಯುಷ್ ಅವರಿಗೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದಿರುವ ಬಿ. ದಿಯಾ ಭೀಮಯ್ಯ ಮತ್ತು ಶಿಕ್ಷಕಿ, ಗಾಯಕಿಯಾಗಿರುವ ಮೀರಾ ಶಂಭು ಇವರಿಗೆ ಗೌರವ ಸಮರ್ಪಣೆ, ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮನೆ ಮನೆ ಕಾವ್ಯಗೋಷ್ಠಿ ಪರಿವಾರದ ಸಂಚಾಲಕ ಪಿ.ಎಸ್. ವೈಲೇಶ ತಿಳಿಸಿದ್ದಾರೆ.