ಚೆಟ್ಟಳ್ಳಿ, ಆ. 21: ಸಮೀಪದ ಕಂಡಕರೆಯ ಯಂಗ್ ಸ್ಪೈಡರ್ಸ್ ಕಂಡಕರೆ ಇವರ ಆಶ್ರಯದಲ್ಲಿ ನಡೆದ ಕೆಪಿಎಲ್ ಸೀಜನ್ 2 ಕಾಲ್ಚೆಂಡು ಪಂದ್ಯಾಟದಲ್ಲಿ ಫ್ಯಾನ್ಸಿ ಫ್ರೆಂಡ್ಸ್ ತಂಡ ಪ್ರಥಮ ಹಾಗೂ ಆತಿಥೇಯ ಯಂಗ್ ಸ್ಪೈಡರ್ಸ್ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಫೈನಲ್ ಪಂದ್ಯಾಟದಲ್ಲಿ ಫ್ಯಾನ್ಸಿ ಫ್ರೆಂಡ್ಸ್ ತಂಡವು ಆತಿಥೇಯ ಯಂಗ್ ಸ್ಪೈಡರ್ಸ್ ತಂಡವನ್ನು 2-0 ಗೋಲು ಗಳ ಅಂತರದಿಂದ ಸೋಲಿಸಿತು.

ಇದಕ್ಕೂ ಮುನ್ನ ನಡೆದ ಮೊದಲನೇ ಸೆಮಿಫೈನಲ್ ಪಂದ್ಯವು ಸ್ಟಾರ್‍ಡಸ್ಟ್ ಎಫ್.ಸಿ ‘ಎ’ ಹಾಗೂ ಯಂಗ್ ಸ್ಪೈಡರ್ಸ್ ತಂಡಗಳ ನಡುವೆ ನಡೆಯಿತು. ಯಂಗ್ ಸ್ಪೈಡರ್ಸ್ ತಂಡವು ಪೆನಾಲ್ಟಿ ಶೂಟೌಟ್‍ನಲ್ಲಿ 3-2 ಗೋಲುಗಳ ಅಂತರದಿಂದ ಗೆದ್ದಿತು.

ಎರಡನೇ ಸೆಮಿಫೈನಲ್ ಪಂದ್ಯವು ಸ್ಟಾರ್‍ಡಸ್ಟ್ ಎಫ್.ಸಿ ‘ಬಿ’ ಹಾಗೂ ಫ್ಯಾನ್ಸಿ ಫ್ರೆಂಡ್ಸ್ ತಂಡಗಳ ನಡುವೆ ನಡೆಯಿತು. ಫ್ಯಾನ್ಸಿ ಫ್ರೆಂಡ್ಸ್ ತಂಡವು 4-0 ಗೋಲುಗಳ ಅಂತರದಿಂದ ಗೆಲವು ಸಾಧಿಸಿತು.

ಪಂದ್ಯಾಟ ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ಯಂಗ್ ಸ್ಪೈಡರ್ಸ್ ತಂಡದ ಜಂಶಾದ್, ಬೆಸ್ಟ್ ಸ್ಕೋರರ್ ಪ್ರಶಸ್ತಿಯನ್ನು ಚಾಂಪಿಯನ್ ತಂಡದ ನೌಷಾದ್ ಪಡೆದುಕೊಂಡರು. ಇಬ್ರಾಹಿಂ ನಾಯಕತ್ವದ ಚಾಂಪಿಯನ್ ತಂಡದಲ್ಲಿ, ನೌಷಾದ್, ಜಂಶೀದ್, ಆಸಿಫ್, ಅನ್ವರ್, ನೌಫಲ್ ಇದ್ದರು.

ದ್ವಿತೀಯ ಸ್ಥಾನ ಪಡೆದ ಉಮರುಲ್ ಫಾರೂಖ್ ನಾಯಕತ್ವದ ತಂಡದಲ್ಲಿ ಇಸ್ಮಾಯಿಲ್ ಕಂಡಕರೆ, ಜಂಶಾದ್, ಆಬಿದ್, ಅಬೂತಾಯಿರ್, ಹಾಗೂ ರಶೀದ್ ಇದ್ದರು. ಪಂದ್ಯಾಟ ತೀರ್ಪುಗಾರರಾಗಿ ಷರೀಫ್, ಆಲಿ, ಇರ್ಷಾದ್, ರಶೀದ್ ಕಾರ್ಯನಿರ್ವಹಿಸಿದರು.

ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮೊಹಮ್ಮದ್ ರಫಿ (ಕುಟ್ಟಿ) , ಹಾರಿಸ್, ಯೂಸುಫ್ ಇದ್ದರು.