ಗೋಣಿಕೊಪ್ಪಲು, ಆ. 21: ಇಲ್ಲಿನ ಕಾವೇರಿ ಕಾಲೇಜಿನ ಎನ್.ಸಿ.ಸಿ. ಘಟಕ ಮತ್ತು ಕೊಡಗು ದಂತ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ ಸಂಯುಕ್ತ ಆಶ್ರಯದಲ್ಲಿ ನೆರೆ ಸಂತ್ರಸ್ತರ ಕೇಂದ್ರಗಳಿಗೆ ತೆರಳಿ ತಿಂಡಿ ತಿನಿಸುಗಳು ಮತ್ತು ವಸ್ತ್ರಗಳನ್ನು ವಿತರಿಸಲಾಯಿತು.
ಕರಡಿಗೋಡು ಮತ್ತು ಗೋಣಿಕೊಪ್ಪಲು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿರುವ ಸಂತ್ರಸ್ತರನ್ನು ಭೇಟಿ ಮಾಡಿದ ಸ್ವಯಂ ಸೇವಕರು ಅವರ ನೋವುಗಳನ್ನು ಆಲಿಸಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಡಾ. ಆನಂದ್, ಲೋಕೇಶ್, ಎನ್.ಸಿ.ಸಿ. ಅಧಿಕಾರಿ ಅಕ್ರಮ್, ಎನ್.ಸಿ.ಸಿ. ನಾಯಕರುಗಳಾದ ನಿಖೇಶ್, ರಜಿತ್, ಅಶ್ವಿನ್, ದೀಪಕ್ ಮತ್ತು ದಂತ ಮಹಾವಿದ್ಯಾಲಯದ 25 ಸ್ವಯಂ ಸೇವಕರು, ಎನ್ï.ಸಿ.ಸಿ. ಘಟಕದ 25 ಕೆಡೆಟ್ಗಳು ಪಾಲ್ಗೊಂಡಿದ್ದರು.