ಗೋಣಿಕೊಪ್ಪ ವರದಿ, ಆ. 22: ಅಶ್ವಿನಿ ಸ್ಪೋಟ್ರ್ಸ್ ಫೌಂಡೇಷನ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಆಯೋಜಿಸಿದ್ದ ಕಿರಿಯರ ವಯೋಮಿತಿಯ ಸಿಐಎಸ್ಸಿಇ ರಾಜ್ಯಮಟ್ಟದ ಹಾಕಿ ಟೂರ್ನಿಯಲ್ಲಿ ಗೋಣಿಕೊಪ್ಪ ಕಾಲ್ಸ್ ತಂಡ ಪ್ರಶಸ್ತಿ ಗೆಲ್ಲುವ ಮೂಲಕ ಸತತ 6ನೇ ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು.
ಫೈನಲ್ ಹಣಾಹಣಿಯಲ್ಲಿ ಗೋಣಿಕೊಪ್ಪ ಕಾಪ್ಸ್ ಶಾಲಾ ತಂಡವನ್ನು ಮಣಿಸಿ ಕಪ್ ಗೆದ್ದುಕೊಂಡಿತು. ಟೂರ್ನಿಯಲ್ಲಿ ನಳಂದ, ಸರಳಬಿರ್ಲಾ, ಜನರಲ್ ತಿಮ್ಮಯ್ಯ, ಡಿಪೌಲ್ ಹಾಗೂ ಚಿನ್ಮಯ ವಿದ್ಯಾಲಯ ತಂಡಗಳು ಪಾಲ್ಗೊಂಡಿದ್ದವು.
ವಿಜೇತ ಕಾಲ್ಸ್ ತಂಡವು ತಾ. 31 ರಿಂದ ಒರಿಸ್ಸಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಟೂರ್ನಿಗೆ ಆಯ್ಕೆಯಾಗಿದೆ.