ಮಡಿಕೇರಿ, ಆ. 22: ನಗರದ ಕೋರ್ಟ್ ರಸ್ತೆಯಲ್ಲಿ ನಿಲ್ಲಿಸಿದ ಝಾಹೀರ್ ಎಂಬವರಿಗೆ ಸೇರಿದ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ವಾಹನದ ಮುಂದಿನ ಭಾಗ ಸುಟ್ಟುಹೋದ ಘಟನೆ ನಡೆದಿದೆ. ಈ ಸಂದರ್ಭ ಸ್ಥಳೀಯ ಅಂಗಡಿಯ ನೌಕರರೊಬ್ಬರು ನೀರು ಹಾಕಿ ಬೆಂಕಿಯನ್ನು ಆರಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ. ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸಿತು.