ಮಡಿಕೇರಿ, ಆ. 22: ಶ್ರೀ ಕ್ಷೇತ್ರ ತಲಕಾವೇರಿ ಸಮೀಪ ಬ್ರಹ್ಮಗಿರಿಬೆಟ್ಟ ಶ್ರೇಣಿಯಲ್ಲಿ ಬೆಟ್ಟಪ್ರದೇಶವನ್ನು ಸಮತಟ್ಟುಗೊಳಿಸಿ ಹಾನಿ ಮಾಡಲಾಗಿರುವ ಘಟನೆಯ ಬಗ್ಗೆ ಆಕ್ಷೇಪಿಸಿ ತಾ. 23ರಂದು (ಇಂದು) ತಲಕಾವೇರಿ ಮೂಲ ಸ್ವರೂಪ ಹಿತರಕ್ಷಣಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬೆಳಿಗ್ಗೆ 10.30ಕ್ಕೆ ಸಾಂಕೇತಿಕವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಬಳಿಕ ಈ ಬಗ್ಗೆ ಜಿಲ್ಲಾಧಿಕಾರಿಗಳು, ಸೇರಿದಂತೆ ಅರಣ್ಯ ಇಲಾಖೆ ಪ್ರಮುಖರಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗುವದು ಎಂದು ಸಮಿತಿ ಪ್ರಮುಖರಾದ ಉಳ್ಳಿಯಡ ಎಂ. ಪೂವಯ್ಯ ಅವರು ತಿಳಿಸಿದ್ದಾರೆ.