ಮಡಿಕೇರಿ, ಆ. 22: ಭಾರೀ ಮಳೆಯಿಂದ ಹಾನಿಗೊಳಗಾದ ಮರಗೋಡು ಮತ್ತು ಕಟ್ಟೆಮಾಡು ಮೂಲದ ಸಂತ್ರಸ್ತರಿಗೆ ಆರ್ಮಡ್ ಆಫ್ ಕೇರ್ (ಂಔಅ) ಸಂಸ್ಥೆಯಿಂದ ಅಗತ್ಯ ವಸ್ತುಗಳನ್ನು ಸಂಘದ ಸದಸ್ಯರಾಗಿರುವ ಕರ್ನಲ್ ಅಯ್ಯಪ್ಪ ಅವರ ಮೂಲಕ ವಿತರಿಸಲಾಯಿತು.
ಈ ಸಂಸ್ಥೆಯು ನಿವೃತ್ತ ಯೋಧರು ನಡೆಸುವ ಒಂದು ಸ್ವಯಂ ಸೇವಕ ಸಂಸ್ಥೆಯಾಗಿದ್ದು; ಮುಂದಿನ ದಿನಗಳಲ್ಲಿ ಈ ಸಂಸ್ಥೆಯು ಕೊಡಗಿನ ಬೇರೆ ಕಡೆ ಹಾನಿಗೊಳಗಾದ ಸಂತ್ರಸ್ತರಿಗೆ ನೆರವು ನೀಡಲಾಗುವದು ಎಂದು ಪ್ರಮುಖರು ತಿಳಿಸಿದ್ದಾರೆ.