*ಗೋಣಿಕೊಪ್ಪಲು, ಆ. 20: ಕೀರೆಹೊಳೆ ಪ್ರವಾಹದಿಂದ ಪರಿಹಾರ ಕೇಂದ್ರಗಳಲ್ಲಿ ಆಶ್ರಯಪಡೆದ 89 ನಿರಾಶ್ರಿತ ಫಲಾನುಭವಿಗಳಿಗೆ 10 ಸಾವಿರ ರೂಪಾಯಿಗಳ ಚೆಕ್ಕನ್ನು ಕಂದಾಯ ಇಲಾಖೆ ವತಿಯಿಂದ ವಿತರಿಸಲಾಯಿತು.
ಆಗಸ್ಟ್ ಮೊದಲ ವಾರದಲ್ಲಿ ಸುರಿದ ಮಳೆಯ ಅಬ್ಬರಕ್ಕೆ ಗೋಣಿಕೊಪ್ಪಲು ಕೀರೆಹೊಳೆಯ ಪ್ರವಾಹದ ಅಬ್ಬರಕ್ಕೆ ಸಿಲುಕಿ ಬಹಳಷ್ಟು ಜನ ಮನೆಗಳು ಸೇರಿದಂತೆ ಗೃಹೋಪಯೋಗಿ ವಸ್ತುಗಳಿಗೆ ಹಾನಿ ಸಂಭವಿಸಿದೆ. ಪ್ರವಾಹ ಸ್ಥಳದಿಂದ ಸ್ಥಳೀಯ ಪ್ರಾಥಮಿಕ ಶಾಲೆಗಳಿಗೆ 250ಕ್ಕೂ ಹೆಚ್ಚು ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿತ್ತು. ಇವರಿಗೆ ಸಂಭವಿಸಿದ ನಷ್ಟವನ್ನು ಪರಿಶೀಲಿಸಿ ಮೊದಲ ಹಂತದ ಪರಿಹಾರವಾಗಿ 10 ಸಾವಿರ ರೂಪಾಯಿಗಳ ಚೆಕ್ಕನ್ನು ನೀಡಲಾಗಿದೆ.
ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಸೀತಾಲಕ್ಷ್ಮಿ, ಪೆÇನ್ನಂಪೇಟೆ ಕಂದಾಯ ಅಧಿಕಾರಿಗಳು, ಮಂಜುನಾಥ್, ಸುನಿಲ್, ಗ್ರಾ.ಪಂ. ಸದಸ್ಯರುಗಳಾದ ಸುರೇಶ್ ರೈ, ಮಂಜುಳಾ, ಅಂಗನವಾಡಿ ಶಿಕ್ಷಕಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಾಂತಿ ಹಾಜರಿದ್ದರು.