ಶನಿವಾರಸಂತೆ, ಆ. 19: ರೋಟರಿ ಸಂಸ್ಥೆ ಹೋಬಳಿ ಘಟಕದ ವತಿಯಿಂದ ಗ್ರಾಮ ಪಂಚಾಯಿತಿಯ ಐವರು ಪೌರ ಕಾರ್ಮಿಕರಿಗೆ ಅಧಿಕ ಮಳೆ ಹಿನ್ನೆಲೆ ರೈನ್ ಕೋಟ್‍ಗಳನ್ನು ವಿತರಿಸಲಾಯಿತು.

ಸಂಸ್ಥೆ ಅಧ್ಯಕ್ಷ ಶುಭು ಹಾಗೂ ಕಾರ್ಯದರ್ಶಿ ಚಂದನ್ ಪಂಚಾಯಿತಿ ಕಚೇರಿಯಲ್ಲಿ ಅಭಿವೃದ್ಧಿ ಅಧಿಕಾರಿ ಮೇದಪ್ಪ ಅವರ ಸಮ್ಮುಖದಲ್ಲಿ ರೈನ್‍ಕೋಟ್‍ಗಳನ್ನು ನೀಡಿದರು.

ಸಂಸ್ಥೆಯ ನಿಕಟಪೂರ್ವ ಕಾರ್ಯದರ್ಶಿ ಎ.ಡಿ. ಮೋಹನ್ ಕುಮಾರ್, ಅರವಿಂದ್ ಮತ್ತಿತರ ಸದಸ್ಯರು, ಪಂಚಾಯಿತಿ ಕಾರ್ಯದರ್ಶಿ ತಮ್ಮಯ್ಯಾಚಾರ್ ಹಾಜರಿದ್ದರು.