ಮಡಿಕೇರಿ, ಆ. 19: ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಯಲ್ಲಿ ಮೋಟಾರು ವಾಹನ ನಿರೀಕ್ಷಕರು ತಪಾಸಣೆ ನಡೆಸಿದ ಸಂದರ್ಭ, ವಿವಿಧ ಪ್ರಕರಣಗಳಲ್ಲಿ ಪ್ರಕರಣ ದಾಖಲಿಸಿದ ಹಾಗೂ ತೆರಿಗೆ ಪಾವತಿಸದ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಈ ವಾಹನಗಳನ್ನು ಮುಂದೆ ಹೇಳಲಾದ ಪೊಲೀಸ್ ಠಾಣೆಗಳ ಸುಪರ್ದಿಯಲ್ಲಿ ಇಡಲಾಗಿದೆ. ಈ ವಾಹನಗಳನ್ನು ತಾ. 29 ರಂದು ಮಧ್ಯಾಹ್ನ 3 ಗಂಟೆಗೆ ವಾಹನ ಇರುವ ಸ್ಥಿತಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಹಿರಂಗ ಹರಾಜು ಮಾಡಲಾಗುವದು.

ವಾಹನವನ್ನು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇರಿಸಲಾಗಿದ್ದು, ಆಸಕ್ತರು ವಾಹನವನ್ನು ಆ ಸ್ಥಳದಲ್ಲಿಯೇ ಪರಿಶೀಲಿಸತಕ್ಕದ್ದು. ವಾಹನ ಸಂ: ಕೆಎ19/8163 (ಎಚ್.ಜಿ.ವಿ.)- ನಾಪೋಕ್ಲು ಪೊಲೀಸ್ ಠಾಣೆ, ನಾಪೋಕ್ಲು ಚಾಸಿಸ್ ಸಂ: ಎಂಬಿ8ಎನ್‍ಎಫ್4ಎಇಇ8121091 (ಮೋಟಾರ್ ಸೈಕಲ್) ಆರ್‍ಟಿಒ ಮಡಿಕೇರಿ, 37012 (ಎಲ್.ಎಂ.ವಿ)-ಶನಿವಾರಸಂತೆ ಪೊಲೀಸ್ ಠಾಣೆ, ಶನಿವಾರಸಂತೆ. ವಾಹನ ಸಂ:ಕೆ.ಎಲ್60/6110 (ಎಚ್‍ಜಿವಿ) ಕುಶಾಲನಗರ ಪೊಲೀಸ್ ಠಾಣೆ.

ಹರಾಜಿನಲ್ಲಿ ಭಾಗಹಿಸುವವರು ಹೆಚ್ಚಿನ ಮಾಹಿತಿಗೆ ಮಡಿಕೇರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸಾರಿಗೆ ಅಧಿಕಾರಿ ಅವರು ತಿಳಿಸಿದ್ದಾರೆ.

ನಗರ ಠಾಣೆಯಲ್ಲಿ: ಕೊಡಗು ಜಿಲ್ಲಾ ಪ್ರಾಚ್ಯ ವಸ್ತು ಸಂಗ್ರಹಾಲಯ ಇಲಾಖೆ ವತಿಯಿಂದ ಕೋಟೆ ಆವರಣದಲ್ಲಿ ವಾರಸುದಾರರಿಲ್ಲದೆ ಇರುವ ಮೋಟಾರು ಸೈಕಲ್‍ಗಳು ಹಾಗೂ ಆಟೋ ರಿಕ್ಷಾಗಳನ್ನು ತೆರವುಗೊಳಿಸುವ ಸಂಬಂಧ ನಗರ ಪೊಲೀಸ್ ಠಾಣಾ ಆವರಣದಲ್ಲಿ ತಾ. 22 ರಂದು ಬೆಳಗ್ಗೆ 10 ಗಂಟೆಗೆ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ತಿಳಿಸಿದ್ದಾರೆ.