ನಾಪೆÇೀಕ್ಲು, ಆ. 19 : ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಚೆರಿಯಪರಂಬು ಪೈಸಾರಿಯಲ್ಲಿ ತಮ್ಮ ಮನೆ, ಮಠಗಳನ್ನು ಕಳೆದುಕೊಂಡು ನಾಪೆÇೀಕ್ಲು ಪ್ರೌಢ ಶಾಲೆಯ ಪರಿಹಾರ ಕೇಂದ್ರದಲ್ಲಿ ನಿರಾಶ್ರಿತರಾಗಿ ಆಶ್ರಯ ಪಡೆದಿದ್ದ ಸುಮಾರು 39 ಜನ ನಿರಾಶ್ರಿತರಿಗೆ ವೀರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ ಅವರು ಪರಿಹಾರವಾಗಿ 10 ಸಾವಿರ ರೂ.ಗಳ ಚೆಕ್ ಮತ್ತು ಆರೋಗ್ಯ ಕಿಟ್ಟ್ ಮತ್ತು ಅಕ್ಕಿ ಇನ್ನಿತ್ತರ ಸಾಮಗ್ರಿಗಳ ಕಿಟ್ಟ್ ವಿತರಿಸಿ ಸಾಂತ್ವನ ಹೇಳಿದರು. ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯ ಪಾಡಿಯಮ್ಮಂಡ ಮುರುಳೀಧರ್ ಕರುಂಬಮ್ಮಯ್ಯ, ತಾಲೂಕು ಪಂಚಾಯತ್ ಅಧ್ಯಕ್ಷೆ ತೆಕ್ಕಡ ಶೋಭಾ ಮೋಹನ್, ತಾಲೂಕು ಪಂಚಾಯತ್ ಸದಸ್ಯೆ ಕೋಡಿಯಂಡ ಇಂದಿರಾ ಹರೀಶ್, ನೆರೆಯಡಂಮ್ಮಂಡ ಉಮ ಪ್ರಭು, ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಗ್ರಾಮ ಪಂಚಾಯತ್ ಸದಸ್ಯ ಟಿ.ಎ. ಮಹಮ್ಮದ್, ತಹಶೀಲ್ದಾರ್ ಮಹೇಶ್, ಕಂದಾಯ ಪರಿವಿಕ್ಷಕ ರಾಮಯ್ಯ, ಗ್ರಾಮ ಲೆಕ್ಕಿಗೆ ಅಮೃತ್ತ, ಪಿ.ಡಿ.ಓ. ಚೋದಕ್ಕಿ ಮತ್ತಿತರರು ಇದ್ದರು.