ಕೂಡಿಗೆ, ಆ. 19: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಮಹಾ ಮೃತ್ಯುಂಜಯ ಯಜ್ಞ ಶ್ರದ್ಧಾಭಕ್ತಿಯಿಂದ ನೆರವೇರಿತು.

ಬೆಳಿಗ್ಗೆ 6 ಗಂಟೆಗೆ ಕಳಸ ಪೂಜೆ, ಗಣಪತಿ ಹೋಮ, 8 ಗಂಟೆಗೆ ಮೃತ್ಯುಂಜಯ ಯಜ್ಞ, ಅಲಂಕಾರ ಪೂಜೆ, 12 ಗಂಟೆಗೆ ಮಹಾಮಂಗಳಾರತಿ, ನಂತರ ಅನ್ನದಾನ ನಡೆಯಿತು. ಅರ್ಚಕ ಶಜಿಪಣಿಕರ್, ಹರಿ ಅವರ ನೇತೃತ್ವದಲ್ಲಿ ಮಹಾ ಮೃತ್ಯಂಜಯ ಯಜ್ಞವು ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಟ.ಎಂ. ಚಾಮಿ, ಕಾರ್ಯದರ್ಶಿ ಸುರೇಶ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಇದ್ದರು.